
ಹೈದರಾಬಾದ್: ಬಹುಭಾಷಾ ನಟಿ ಪೂಜಾ ಹೆಗ್ಡೆ ಬಾಲಿವುಡ್‌ನಿಂದ ಮತ್ತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ರಜನಿಕಾಂತ್ ಅವರ ‘ಕೂಲಿ’ ಚಿತ್ರದ ‘ಮೋನಿಕಾ’ ಹಾಡಿನಲ್ಲಿ ಸಖತ್ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದ ಅವರು, ಇದೀಗ ಐದು ವರ್ಷಗಳ ಬಳಿಕ ಟಾಲಿವುಡ್‌ಗೆ ಮರಳಿದ್ದಾರೆ. ಮಾಲಿವುಡ್ ನಟ ದುಲ್ಕರ್ ಸಲ್ಮಾನ್ ಜೊತೆ ಹೊಸ ಚಿತ್ರವೊಂದರಲ್ಲಿ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
‘DQ41’ ಚಿತ್ರಕ್ಕೆ ಮುಹೂರ್ತ
ದುಲ್ಕರ್ ಸಲ್ಮಾನ್‌ರವರ ‘ಲಕ್ಕಿ ಭಾಸ್ಕರ್’ ಚಿತ್ರದ ನಂತರದ ಈ ಹೊಸ ಸಿನಿಮಾಗೆ ‘DQ41’ ಎಂದು ತಾತ್ಕಾಲಿಕ ಹೆಸರಿಡಲಾಗಿದೆ. ಚಿತ್ರದ ಮುಹೂರ್ತ ಈಗಾಗಲೇ ನೆರವೇರಿದ್ದು, ಪೂಜಾ ಹೆಗ್ಡೆ ಮತ್ತು ದುಲ್ಕರ್ ಸಲ್ಮಾನ್ ಜೊತೆಗಿರುವ ಶೂಟಿಂಗ್‌ನ ಬಿಟಿಎಸ್ (BTS) ವಿಡಿಯೋ ಕೂಡ ರಿಲೀಸ್ ಆಗಿದೆ. ಇಬ್ಬರೂ ತಾರೆಯರು ಪರಸ್ಪರ ಬಹಳ ಕ್ಯೂಟ್ ಆಗಿ ಕಾಣಿಸಿಕೊಂಡಿರುವ ವಿಡಿಯೋ ಚಿತ್ರರಂಗದಲ್ಲಿ ಕುತೂಹಲ ಮೂಡಿಸಿದೆ.
ಈ ಚಿತ್ರಕ್ಕೆ ರವಿ ನೆಲಕುಡಿತಿ ನಿರ್ದೇಶನ ಮಾಡುತ್ತಿದ್ದು, ಇದು ಅವರ ಚೊಚ್ಚಲ ಚಿತ್ರವಾಗಿದೆ. ಸುಧಾಕರ್ ಚೆರುಕುರಿ ಅವರ ‘ಎಸ್‌ಎಲ್‌ವಿ ಸಿನಿಮಾಸ್’ ಬ್ಯಾನರ್ ಅಡಿ ನಿರ್ಮಾಣವಾಗಲಿರುವ ಈ ಚಿತ್ರಕ್ಕೆ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ನೀಡಲಿದ್ದಾರೆ. 2020ರಲ್ಲಿ ಸಹಿ ಹಾಕಿದ್ದ 2022ರಲ್ಲಿ ಬಂದ ಚಿರಂಜೀವಿ – ರಾಮ್‌ಚರಣ್ ಅವರ ʼಆಚಾರ್ಯʼ ಸಿನಿಮಾದಲ್ಲಿ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದರು.ವೆಂಕಟೇಶ್ ಅವರ ʼF3ʼ ಅತಿಥಿ ಪಾತ್ರದಲ್ಲಿ ಪೂಜಾ ನಟಿಸಿದ್ದರು.