ಕುಚ್ಚೂರು ಹೆರ್ಗ ವಿಠ್ಠಲ ಶೆಟ್ಟಿ ಸರಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಸ್ನೇಹಲತಾ ಟಿ. ಜಿ. ಯವರು ಮುದ್ರಾಡಿಯ ಎಂ.ಎನ್. ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸರಕಾರ ಮತ್ತು ವಿವಿಧ ಸಂಘಗಳನ್ನು ದೀಪಬೆಳಗಿ ಉದ್ಘಾಟಿಸಿದರು
ಕ್ರಿಯೇಟಿವ್ ಕಾಲೇಜು ಕಾರ್ಕಳದ ಹೊಸ ಪರಿಕಲ್ಪನೆಯಿಂದ ಹುಟ್ಟಿಕೊಂಡಿರುವ ಕ್ರಿಯೇಟಿವ್ ಸ್ಫೂರ್ತಿ ಮಾತು ಸರಣಿ ಕಾರ್ಯಕ್ರಮದ 9ನೇ ಆವೃತ್ತಿಯ ಕಾರ್ಯಕ್ರಮವು ಕಲಿಯುವುದು ಒಂದು ಹಬ್ಬ- ಸಂಭ್ರಮಿಸೋಣ ಎಂಬ ಶೀರ್ಷಿಕೆಯಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಜರುಗಿತು.
ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ ಇಲ್ಲಿಯ ಪ್ರೌಢಶಾಲಾ ವಿಭಾಗದ ನೂತನ ಎನ್‌ಸಿಸಿ ನೇವಲ್ ಘಟಕವನ್ನು ಎನ್ ಸಿ ಸಿ ನೆವೆಲ್ ಕಮಾಂಡರ್ ಶ್ರೀ ಅಶ್ವಿನ್ ಎಂ ರಾವ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸುವ ಐ.ಐ.ಎಸ್.ಇ.ಆರ್ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 7 ವಿದ್ಯಾರ್ಥಿಗಳಿಗೆ ಜನರಲ್ ಮೆರಿಟ್‌ನಲ್ಲಿ ಸಾವಿರದೊಳಗಿನ ರ‍್ಯಾಂಕ್ ಗಳು ಬಂದಿದ್ದು, ಸಂಸ್ಥೆಯ ವಿದ್ಯಾರ್ಥಿ ಸರ್ವಜಿತ್ ಜನರಲ್ ಮೆರಿಟ್ ವಿಭಾಗದಲ್ಲಿ 90ನೇ ರ‍್ಯಾಂಕ್ ತನ್ನದಾಗಿಸಿಕೊಂಡಿದ್ದಾರೆ.