ದಿನಾಂಕ 30-06-2025ರಂದು ಎಸ್.ವಿ.ಎಚ್. ಕನ್ನಡ ಮಾಧ್ಯಮ ಪ್ರೌಢ ಶಾಲೆ, ಇನ್ನಂಜೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನಿವೃತ್ತ ಹಿಂದಿ ಶಿಕ್ಷಕ ಯು.ಎಸ್.ರಾಜಗೋಪಾಲ ಆಚಾರ್ಯ ಇವರು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಯಾವ ರೀತಿ ಓದಬೇಕು. ಪಾಠ ಅಭ್ಯಾಸ ಮಾಡುವ ರೀತಿಯ ಬಗ್ಗೆ ತರಬೇತಿ ನೀಡಿದರು.
ಶ್ರೀರಾಮ ಸಂಗೀತಾಲಯದ ಉದ್ಘಾಟನಾ ಸಮಾರಂಭವು ವಿದ್ವಾನ್ ಶ್ರೀ ಅಶೋಕ್ ಆಚಾರ್ಯ ಸೈಬ್ರಾಕಟ್ಟೆ, ವಿದ್ವಾನ್ ಶ್ರೀ ಯಶವಂತ್ ಎಂ. ಜಿ, ಶ್ರೀ ರಾಘವೇಂದ್ರ ತೆಳ್ಳಾರು ರಸ್ತೆ ಕಾರ್ಕಳ, ಶ್ರೀ ಜಯರಾಮ ಆಚಾರ್ಯ ಕೋಟ್ನಕಟ್ಟೆ, ಹಿರಿಯಡಕ ಇವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ (ರಿ) ಕೊಂಡಾಡಿ ಭಜನೆಕಟ್ಟೆ ಇಲ್ಲಿ ನಡೆಯಿತು.
ಬೆಳ್ಮಣ್ಣ್ ಗ್ರಾಮೀಣ ಕಾಂಗ್ರೇಸ್ ಸಮಿತಿಯನ್ನು ಪುನರ್ ರಚಿಸುವ ಬಗ್ಗೆ ಪಕ್ಷದ ಹಿರಿಯರು ಮತ್ತು ಸರ್ವ ಕಾರ್ಯಕರ್ತರ ಸಭೆಯು ದಿನಾಂಕ 29 ಅದಿತ್ಯವಾರ ಸಂಜೆ 5 ಘಂಟೆಗೆ ಬೆಳ್ಮಣ್ಣ್ ಉಮೇಶ್ ಶೆಟ್ಟಿಯವರ ಮನೆಯಲ್ಲಿ ಗ್ರಾಮೀಣ ಸಮಿತಿ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.