ಕನ್ನರ್ಪಾಡಿ-ಕಿನ್ನಿಮೂಲ್ಕಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯು ಆಯೋಜಿಸಿರುವ 20ನೇ ವರ್ಷದ ಗಣೇಶೋತ್ಸವ ಸಂಭ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು (ಆ. 30, ಶನಿವಾರ) ಭಾಗವಹಿಸಲಿದ್ದಾರೆ.
ಮುದ್ರಾಡಿಯ ಹಿರಿಯ ವೈದ್ಯರು ಮತ್ತು ವಿದ್ಯಾಸಾಗರ ಎಜುಕೇಶನ್ ಟ್ರಸ್ಟಿನ ಖಜಾಂಚಿ ಡಾ. ಎಂ. ಎಸ್. ರಾವ್ ಅವರು ಆಗಸ್ಟ್ 29 ರಂದು ಮುದ್ರಾಡಿ ಎಂ. ಎನ್. ಡಿ. ಎಸ್. ಎಂ. ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ನಡೆದ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಿ ಮಾತನಾಡಿದರು.
ಇಂದು ಸೂರಜ್ ಶೆಟ್ಟಿ ನಕ್ರೆ ಇವರ ಸಂಜನಾ ಆರ್ಕೆಡ್ ಕಾರ್ಕಳ ಇಲ್ಲಿ ನಡೆಸುತ್ತಿದ್ದ ಕ್ರಿಯೇಟಿವ್ ಅಸೋಸಿಯೇಟ್ಸ್ ಶಾಖೆಯು ನೂತನವಾಗಿ ಕಾರ್ಕಳ ಜೋಡುರಸ್ತೆಯ BTK ಪೆಟ್ರೋಲ್ ಪಂಪ್ ಎದುರುಗಡೆ ಇರುವ ಅಧಿದನ್ ಕಟ್ಟಡದಲ್ಲಿ ಆರ್ನಿ ಇಂಜಿನಿಯರಿಂಗ್ ಮತ್ತು ಕಂಟ್ರಾಕ್ಟರ‍್ಸ್ ಎಂಬ ಹೆಸರಿನೊಂದಿಗೆ ಶುಭಾರಂಭಗೊಂಡಿದೆ.