ಅಹಿಂಸ ಅನಿಮಲ್ ಟ್ರಸ್ಟ್ ಬಜಗೋಳಿ ಇಲ್ಲಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ರೂಪಾಯಿ ಎರಡು ಲಕ್ಷದ ಮೊತ್ತದ ಅನುದಾನವನ್ನು ತಾಲೂಕಿನ ಯೋಜನಾಧಿಕಾರಿಗಳಾದ ಹೇಮಲತಾರವರು ಅನಿಮಲ್ ಟ್ರಸ್ಟ್ ನ ವೀರಾಂಜಯ ಹೆಗ್ಡೆಯವರಿಗೆ ವಿತರಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಇರ್ವತ್ತೂರು ಇಲ್ಲಿನ ಅಂಗಳಕ್ಕೆ ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಇಂಟರ್ಲಾಕ್ ಅಳವಡಿಕ ಕೊಡುಗೆ ಹಸ್ತಾಂತರ ಕಾರ್ಯಕ್ರಮವು ದಿನಾಂಕ 28/02/2025ರಂದು ನೆರವೇರಿತು.