ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ, ಉಡುಪಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕೇಂದ್ರ ಸಮಿತಿ, ಧರ್ಮಸ್ಥಳ ಇವರ ಸಹಯೋಗದೊಂದಿಗೆ ಗುರುಪೂರ್ಣಿಮಾ ಪ್ರಯುಕ್ತ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿವರ್ಯರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರಿಗೆ ಭವ್ಯ ಗುರುವಂದನಾ ಕಾರ್ಯಕ್ರಮ ನಡೆಯಿತು.
ಗುರುಪೂರ್ಣಿಮಾ ಆಚರಣೆಯ ಪುಣ್ಯದಿನದಂದು ಪಾಜಕ ಕ್ಷೇತ್ರದ ಅರ್ಚಕರು ಹಾಗೂ ಗುರುಗಳಾದ ವೇದಮೂರ್ತಿ ಶ್ರೀ ಮಾಧವ ಉಪಾಧ್ಯಾಯ (ಶ್ರೀಮತಿ ರತ್ನ) ದಂಪತಿಗಳನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಲೋಕಕಲ್ಯಾಣ, ಧರ್ಮದ ಸ್ಥಾಪನೆ ಮತ್ತು ದುಷ್ಟ ಶಕ್ತಿಗಳ ನಿರ್ಮೂಲನೆಯ ಉದ್ದೇಶದೊಂದಿಗೆ ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪ್ರಾರಂಭವಾಗಿರುವ ದಶಾವತಾರ ಮಂತ್ರ ಹೋಮದ ಸರಣಿಯಲ್ಲಿ, ಇತ್ತೀಚಿಗೆ ಮತ್ತೊಂದು ಹೋಮ ಕಾರ್ಯಕ್ರಮ ಗುರುವಾರ (ಜೂನ್ 26)ರಂದು ನಡೆಯಿತು.