ಕೆಮ್ಮಣ್ಣು ಶ್ರೀ ಮಾರಿಕಾಂಬ ಕುಣಿತ ಭಜನಾ ಮಂಡಳಿಯ ಶುಭಾರಂಭ

Date:

spot_img

ಉಡುಪಿ : ಉಡುಪಿಯ ಪುರಾತನ ಪ್ರಾಧಾನ್ಯ ಶಕ್ತಿಪೀಠವಾದ ಕೆಮ್ಮಣ್ಣು ಶ್ರೀ ಮಾರಿಕಾಂಬಾ ಭದ್ರಕಾಳಿ ಅಮ್ಮನವರ ದೇವಸ್ಥಾನದ ಸನ್ನಿಧಿಯಲ್ಲಿ ಶ್ರೀ ಮಾರಿಕಾಂಬಾ ಮಕ್ಕಳ ಕುಣಿತ ಭಜನಾ ಮಂಡಳಿ ಎಂಬ ಹೆಸರಿನ ಭಜನಾ ಮಂಡಳಿಯು ಶುಭಾರಂಭವಾಯಿತು. ದೀಪ ಪ್ರಜ್ವಲಿಸಿ ಶ್ರೀ ದೇವರಿಗೆ ಕುಣಿತ ಭಜನಾ ಸೇವೆ ಮಾಡುವ ಮೂಲಕ ವಿಧ್ಯುಕ್ತವಾಗಿ ಆರಂಭವಾದ ಈ ಭಜನಾ ಮಂಡಳಿಯು ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು.

ಉಡುಪಿ ತಾಲೂಕು ಭಜನಾ ಪರಿಷತ್ತಿನ ನೇತೃತ್ವದಲ್ಲಿ ಧರ್ಮಸ್ಥಳ ಭಜನಾ ಕಮ್ಮಟದಲ್ಲಿ ನುರಿತ ಶಿಬಿರಾರ್ಥಿಗಳಾಗಿ ತರಬೇತಿ ಪಡೆದವರು ಈ ‌ಭಜನಾ ಮಂಡಳಿಗೆ ತರಬೇತಿ ನೀಡಿ ಸಹಕರಿಸಿದ್ದರು.

ಈ ಸಂದರ್ಭದಲ್ಲಿ ಶ್ರೀ ಭದ್ರಕಾಳಿ ಮಾರಿಕಾಂಬ ಅಮ್ಮನವರ ದೇವಸ್ಥಾನದ ಗೌರವಾಧ್ಯಕ್ಷರಾದ ಶ್ರೀ ಜಯಕೃಷ್ಣ.ಎ.ಶೆಟ್ಟಿ , ಅಧ್ಯಕ್ಷರಾದ ಶ್ರೀ ರಘುರಾಮ ಶೆಟ್ಟಿ , ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕಿನ ಅಧ್ಯಕ್ಷರಾದ ಶ್ರೀ ವಿಜಯ ಶೆಟ್ಟಿ ಕೊಂಡಾಡಿ , ಶ್ರೀ ಮಾರಿಕಾಂಬ ಕುಣಿತ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀ ಸದಾಶಿವ ಕೊಟ್ಯಾನ್, ಉಡುಪಿ ತಾಲೂಕು ಭಜನಾ ಪರಿಷತ್ತಿನ ಕೋಶಾಧಿಕಾರಿಯಾದ ಶ್ರೀಮತಿ ಪೂರ್ಣಿಮಾ , ಉಡುಪಿ ತಾಲೂಕು ಭಜನಾ ಪರಿಷತ್ತ್ ಹಾಗೂ ವಿವಿಧ ಭಜನಾ ಮಂಡಳಿಗಳ ಪದಾಧಿಕಾರಿಗಳಾದ ಶ್ರೀ ಗೋಕುಲದಾಸ್ ನಾಯಕ್, ಶ್ರೀ ಶಂಕರ ಆಚಾರ್ಯ, ಆಶಾ ಕುಂದರ್, ಜ್ಯೋತಿ , ಚೇತನ್, ಕೀರ್ತನ್, ಕೌಶಿಕ್, ಅಕ್ಷಯ್, ವಿಖ್ಯಾತ್, ಸುಶಾಂತ್, ಸುದೀಪ್, ದಿಲೀಪ್, ಅಮಿತ್, ಸಾತ್ವಿಕ್, ಸುದರ್ಶನ್, ಶ್ರಾವ್ಯ, ಅಶ್ವಿತಾ ಇವರೊಂದಿಗೆ ಊರಿನ ಗಣ್ಯರು , ಹಿರಿಯರು, ಮಕ್ಕಳ ಪೋಷಕರು ಮತ್ತು ಹಿತೈಷಿಗಳು ಉಪಸ್ಥಿತರಿದ್ದು ಭಜನಾ ಮಂಡಳಿಯ ಸರ್ವ ಸದಸ್ಯರಿಗೂ ಶುಭಹಾರೈಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬಳ್ಳಾರಿ ಕೊಲೆ ಪ್ರಕರಣ: ಕಿರುಕುಳ ಆರೋಪಕ್ಕೆ ಯುವಕನ ಹತ್ಯೆ, 3 ಮಂದಿ ಅರೆಸ್ಟ್

ಬಳ್ಳಾರಿಯಲ್ಲಿ ಯುವಕನ ಹತ್ಯೆ ಪ್ರಕರಣದಲ್ಲಿ ಮಹಿಳೆ ಸೇರಿ 3 ಮಂದಿಯನ್ನು ಬಂಧಿಸಿದ ಪೊಲೀಸರು. ಕೊಲೆಯ ಹಿಂದಿನ ಆಘಾತಕಾರಿ ಕಾರಣ ಬಹಿರಂಗ, ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ

ಬೆಂಗಳೂರು ಯುವತಿ ಹತ್ಯೆ: ಅನುಮಾನಕ್ಕೆ ಗೆಳತಿಯನ್ನು ಕೊಂದ ಪ್ರಿಯಕರ

ಬೆಂಗಳೂರಿನ ಬೆಳ್ಳಂದೂರಿನಲ್ಲಿ ಪ್ರೇಮ ಸಂಬಂಧದ ಅನುಮಾನಕ್ಕೆ 22 ವರ್ಷದ ಯುವತಿಯನ್ನು ಪ್ರಿಯಕರ ಹತ್ಯೆಗೈದ ಘಟನೆ ಸಂಚಲನ ಮೂಡಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಡಿಕೆಶಿ ಖಡಕ್ ಸೂಚನೆ: ಲಂಚ ಮುಕ್ತ ಕರ್ನಾಟಕಕ್ಕೆ ಕಠಿಣ ಕ್ರಮ

ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಸಿಎಂ ಡಿಕೆ ಶಿವಕುಮಾರ್ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಮಂಗಳೂರು ತಂಡಕ್ಕೆ ಕರುಣ್ ನಾಯರ್ ನಾಯಕ

ಮಹಾರಾಜ ಟ್ರೋಫಿ ಟಿ20 ಟೂರ್ನಿಗೆ ಮಂಗಳೂರು ತಂಡದ ಜರ್ಸಿ ಬಿಡುಗಡೆಯಾಗಿದ್ದು, ಕರುಣ್ ನಾಯರ್ ನಾಯಕರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ