ರಾಜ್ಯ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಅನುಕೂಲವಾಗುವಂತೆ ಹಾಗೂ ಸಾರ್ವಜನಿಕ ಸೇವೆಗೆ ಸಹಾಯವಾಗುವಂತೆ ಕಾರ್ಕಳ ಬೈಲೂರಿನಲ್ಲಿ ಕಾಂಗ್ರೆಸ್ ಜನಸೇವಾ ಕಚೇರಿಯು ಇಂದು ಉದ್ಘಾಟನೆಗೊಳ್ಳಲಿದೆ
ಶ್ರೀ ಹೊಸ ಮಾರಿಗುಡಿ ದೇವಾಲಯದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಭಕ್ತಾದಿಗಳ ನಿಷ್ಠಾ ಸಮರ್ಪಣೆಯಾದ ಸ್ವರ್ಣ ಗದ್ದುಗೆ, ರಜತ ರಥ, ಬೃಹತ್ ಘಂಟೆ, ಚಿನ್ನದ ಶ್ರೀಪಾದಪೀಠ, ಚಿನ್ನದ ಮುಖ ಹಾಗೂ ರಾಜಗೋಪುರದ ಹೆಬ್ಬಾಗಿಲು ಪುರಪ್ರವೇಶವು ಬಹಳ ಅದ್ದೂರಿಯಾಗಿ ಶೋಭಾಯಾತ್ರೆಯೊಂದಿಗೆ ಜರುಗಿತು.
ಕಾರ್ಕಳ ತಾಲ್ಲೂಕು ಹಿರ್ಗಾನ ಗ್ರಾಮದ ಚಿಕ್ಕಲ್ ಬೆಟ್ಟು ಶ್ರೀ ಮಹಾವಿಷ್ಣುಮೂರ್ತಿ, ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ದಿನಾಂಕ 12-02-2025 ರಿಂದ 16.02.2025 ರವರೆಗೆ ನಡೆಯಲಿರುವ ಉತ್ಸವದ ಅಂಗವಾಗಿ ಪೂರ್ವ ಸಿದ್ಧತೆಯಾಗಿ ದಿನಾಂಕ 9-02-2025 ರಂದು ಸ್ವಚ್ಛತಾ ಕಾರ್ಯಕ್ರಮ ಜರಗಿತು
ಶ್ರೀ ದುರ್ಗಾ ಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘ ಜೋಡುರಸ್ತೆ ಕಾರ್ಕಳ ಇದರ ವತಿಯಿಂದ ಸಾರ್ವಜನಿಕ ಸರಕಾರಿ ಆಸ್ಪತ್ರೆ ಕಾರ್ಕಳ ಇಲ್ಲಿಗೆ ರೆಫ್ರೀಜರೇಟರ್ ಹಾಗೂ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಶ್ರೀ ವಿ ಸುನಿಲ್ ಕುಮಾರ್ ಇವರ ಉಪಸ್ಥಿತಿಯಲ್ಲಿ ನಡೆಸಲಾಯಿತು