Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Date:

spot_img

ಅಶೋಚ್ಯಾನನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ|(2-11) ಶ್ರೀಕೃಷ್ಣ ದುಃಖ ಪಡಬಾರದೆಂದವನಲ್ಲ. ದುಃಖಪಡಬಾರದ್ದಕ್ಕೆ ದುಃಖ ಪಡಬಾರದು- ಇದು ಶ್ರೀಕೃಷ್ಣನ ಮೊತ್ತ ಮೊದಲ ಉದ್ಗಾರ. ದುಃಖಪಡಬೇಕಾದ್ದಕ್ಕೆ ದುಃಖಪಡಬೇಕು. ಎಲ್ಲಿ ಬೇರೆಯವರಿಗೆ ಕಷ್ಟವಾಗುತ್ತದೋ ಅಲ್ಲಿ ದುಃಖ ಪಡಬೇಕು.

“ಪ್ರಜ್ಞಾವಾದಾಂತ’ ಎಂದು ಹೇಳುವ ಬದಲು ಬಹುವಚನ (ಪ್ರಜ್ಞಾವಾದಾಂಶ್ಚ) ಹೇಳಿದ್ದೇಕೆ? ಅರ್ಜುನನ ಪ್ರತಿವಾದಕ್ಕೂ ವಿರುದ್ಧಾರ್ಥಗಳಿವೆ. ಅನೇಕ ವಾದಗಳಿವೆ. ಸ್ಥಿರವಾದಗಳಿಲ್ಲ. ಹಿಂದಿನ ಮಾತಿಗೂ ಮುಂದಿನ ಮಾತಿಗೂ ಸಂಬಂಧವಿಲ್ಲ. ಪ್ರಜ್ಞಾ =ತಿಳಿದುಕೊಂಡವ. ಆದರೆ ವಾಸ್ತವದಲ್ಲಿ ಅರ್ಜುನ ಹಾಗಿಲ್ಲ. “ತುಂಬ ತಿಳಿದುಕೊಂಡವರ ಹಾಗೆ’ ಅರ್ಜುನನಿದ್ದ. ವಾದವನ್ನು ಮಾಡು ಎಂದು ಹೇಳುವುದೇ ವಿನಾ ವಾದವನ್ನು ಹೇಳು ಎಂದು ಹೇಳುವುದಿಲ್ಲ. ನೀನು ಭಾಷಣ ಮಾಡುತ್ತಿದ್ದೀ (ಭಾಷಸೇ) ಎನ್ನುತ್ತಾನೆ.

ಭಾಷಣವೆಂದರೆ ಇನ್ನೊಬ್ಬರಿಗೆ ಮರಳಾಗುವಂತೆ ಮಾತನಾಡುವುದು. ನಿಜವಾಗಿ ಅಲ್ಲಿ ಶಕ್ತಿ ಇಲ್ಲ. ಪ್ರಜ್ಞಾವಾದವೆಂದರೆ ಮನಸ್ಸಿಗೆ ಬಂದಂತೆ ಮಾತನಾಡುವುದು ಎಂಬರ್ಥವೂ ಇದೆ. ಮನುಷ್ಯನ ದೋಷ ತನಗೆ ತೋರಿದ್ದೇ ಪರಮಪ್ರಮಾಣ ಎಂದು ತಿಳಿಯುವುದು. ನನ್ನ ಮನಸ್ಸಿಗೆ ಬಂದದ್ದೇ ಸರಿ ಎಂದು ತಿಳಿದರೆ ಸತ್ಯ ಕಾಣುವುದಿಲ್ಲ. ಮೋಹಕ್ಕೆ ಒಳಗಾಗುವುದು ಸಹಜ, ಅದರಿಂದ ಹೊರಬರುವುದೂ ಅಗತ್ಯ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಆನಂದತೀರ್ಥ ವಿದ್ಯಾಲಯದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ

ಉಡುಪಿಯ ಆನಂದತೀರ್ಥ ವಿದ್ಯಾಲಯದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಚಿಣ್ಣರ ಅಕ್ಷರಾಭ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಟಾಟಾ ಕ್ರಾಂತಿ: ವಾಣಿಜ್ಯ ವಾಹನ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಹೊಸ ಇಂಟ್ರಾ V40 ಪಿಕಪ್ ಟ್ರಕ್

ಟಾಟಾ ಮೋಟಾರ್ಸ್‌ನಿಂದ ಹೊಸ ಇಂಟ್ರಾ V40 ಪಿಕಪ್ ಟ್ರಕ್ ಬಿಡುಗಡೆ. ಬೈ-ಫ್ಯುಯೆಲ್ ತಂತ್ರಜ್ಞಾನ ಹಾಗೂ 1,525 ಕೆಜಿ ಪೇಲೋಡ್ ಸಾಮರ್ಥ್ಯದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ದಿನ ವಿಶೇಷ – ವಿಶ್ವ ಪರಿಸರ ದಿನ

ಜೂನ್ 5 ರ ವಿಶ್ವ ಪರಿಸರ ದಿನದ ಮಹತ್ವ ಮತ್ತು ಪ್ರಕೃತಿ ಸಂರಕ್ಷಣೆಗಾಗಿ ಈ ಜಾಗತಿಕ ದಿನವನ್ನು ಏಕೆ ಆಚರಿಸಲಾಗುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ತೂಕ ಇಳಿಕೆಯಿಂದ ಹಿಡಿದು ಲಿವರ್ ರಕ್ಷಣೆವರೆಗೆ; ದಿನಾ ಸೀಮೆ ಬದನೆ ತಿಂದ್ರೆ ಈ ಕಾಯಿಲೆಗಳೆಲ್ಲಾ ಗೂಡು ಬದಲಿಸುತ್ತವೆ

ಸೀಮೆ ಬದನೆಕಾಯಿಯ ಅದ್ಭುತ ಆರೋಗ್ಯ ಪ್ರಯೋಜನಗಳು! ತೂಕ ನಿಯಂತ್ರಣ, ಲಿವರ್ ಮತ್ತು ಹೃದಯದ ರಕ್ಷಣೆಗೆ ಇದು ಹೇಗೆ ಸಹಕಾರಿ ತಿಳಿಯಲು ಈ ಲೇಖನ ಓದಿ.