
ವಿಶ್ವ ಗ್ರಾಹಕರ ದಿನ
World Consumer Rights Day
ಗ್ರಾಹಕರ ಅವಶ್ಯಕತೆಗೆ ಅನುಗುಣವಾಗಿ ಸೌಲಭ್ಯವನ್ನು ಒದಗಿಸುವುದು ವ್ಯಾಪಾರಸ್ಥರ ಕರ್ತವ್ಯ. ಅದಕ್ಕೆ ವಿರುದ್ಧವಾಗಿ ಅಲ್ಲಿ ಆಗುವ ಅವ್ಯವಸ್ಥೆ ಹಾಗು ಮೋಸ ವಂಚನೆಗಳನ್ನು ನಿಲ್ಲಿಸಬೇಕು ಎನ್ನುವ ಉದ್ದೇಶದಿಂದ ಗ್ರಾಹಕರಿಗೆ ನೇರವಾಗಿ ದೂರುಗಳನ್ನು ಒದಗಿಸುವ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಬಹುದು ಉದ್ದೇಶದಿಂದ ಪ್ರಾರಂಭವಾದ ದಿನ ಈ ವಿಶ್ವ ಗ್ರಾಹಕರ ದಿನ. ಯಾವುದೇ ವ್ಯಕ್ತಿಗಳು ಮತ್ತೊಂದು ವ್ಯಕ್ತಿಗಳ ಮೂಲಕವೇ ಬದುಕು ಕಟ್ಟಿಕೊಳ್ಳಬೇಕು. ಹಾಗಿರುವಲ್ಲಿ ವ್ಯಾಪಾರಸ್ಥರಂತು ಗ್ರಾಹಕರ ಮೂಲಕವೇ ಬದುಕಬೇಕು. ಲೆಕ್ಕಕಿಂತ ಮೀರಿ ಮೋಸ ವಂಚನೆಗಳನ್ನು ಮಾಡಿ ಹಣ ಮಾಡುವ ಉದ್ದೇಶ ಅವರಲ್ಲಿ ಇರುವುದು ಸಾಧುವಲ್ಲ ಎನ್ನುವ ಉದ್ದೇಶದಿಂದ ಅಮೇರಿಕಾ ಗ್ರಾಹಕರಿಗೆ ನೇರವಾಗಿ ಇದರ ವಿರುದ್ಧ ಹೋರಾಡುವ ಈ ವ್ಯವಸ್ಥೆಯನ್ನು ವಿಶ್ವಮಟ್ಟದಲ್ಲಿ ಒದಗಿಸಿಕೊಟ್ಟಿದೆ. ಜಾನ್ ಎಫ್ ಕೆನಡಿಯ ಮೂಲಕ 1983 ರಂದು ಇದು ವಿಶ್ವಗ್ರಾಹಕರ ದಿನ ಎಂದು ತೀರ್ಮಾನಿಸಲಾಯಿತು.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ



































