
ಮಧುಮೇಹವು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದ್ದು, ರಕ್ತದಲ್ಲಿನ ಶುಗರ್ ಲೆವೆಲ್ ನಿಯಂತ್ರಣದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಸಿಹಿತಿಂಡಿಗಳಷ್ಟೇ ಅಲ್ಲ, ಕೆಲವೊಂದು ಹಣ್ಣುಗಳಲ್ಲೂ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶವಿರುವುದರಿಂದ ಮಧುಮೇಹಿಗಳಿಗೆ ಅಪಾಯಕಾರಿಯಾಗಿದೆ.
ಮಧುಮೇಹಿಗಳು ತಪ್ಪಿಸಬೇಕಾದ ಹಣ್ಣುಗಳು:
ಮಾವಿನ ಹಣ್ಣು: ಈ ಹಣ್ಣಿನ ಸಿಹಿಯು ರಕ್ತದಲ್ಲಿನ ಶುಗರ್ ಲೆವೆಲ್ ಅನ್ನು ವೇಗವಾಗಿ ಹೆಚ್ಚಿಸಬಹುದು.
ದ್ರಾಕ್ಷಿ: ನೈಸರ್ಗಿಕ ಸಕ್ಕರೆಯ ಅಂಶದಿಂದ ಮಧುಮೇಹಿಗಳಿಗೆ ಇದನ್ನು ತಿನ್ನುವುದು ಸೂಕ್ತವಲ್ಲ.
ಲಿಚಿ: ಸಕ್ಕರೆಯ ಅಂಶ ಹೆಚ್ಚಿರುವುದರಿಂದ ಇದೂ ಅಪಾಯಕಾರಿ.
ಕಲ್ಲಂಗಡಿ: ನೀರಿನ ಕೊರತೆಯನ್ನು ನೀಗಿಸುತ್ತದಾದರೂ ಶುಗರ್ ಲೆವೆಲ್ ಏರಿಸಬಹುದು.
ಅನಾನಸ್: ಕಾರ್ಬೋಹೈಡ್ರೇಟ್ ಹಾಗೂ ಶುಗರ್ ಪ್ರಮಾಣ ಹೆಚ್ಚು ಇದ್ದುದರಿಂದ ಮುಂಜಾಗ್ರತೆ ಅಗತ್ಯ.
ಬಾಳೆ ಹಣ್ಣು: ಮಧ್ಯಮ ಗಾತ್ರದ ಬಾಳೆ ಹಣ್ಣಿನಲ್ಲಿ 27 ಗ್ರಾಂ ಕಾರ್ಬೋಹೈಡ್ರೇಟ್ ಹಾಗೂ 14 ಗ್ರಾಂ ಸಕ್ಕರೆ ಇರುವುದರಿಂದ ಮಧುಮೇಹಿಗಳಿಗೆ ತಕ್ಷಣ ಶುಗರ್ ಲೆವೆಲ್ ಹೆಚ್ಚಿಸುವ ಸಾಧ್ಯತೆ ಇರುತ್ತದೆ.
ಮಧುಮೇಹಿಯರು ಈ ಹಣ್ಣುಗಳ ಸೇವನೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.