spot_img

ಜೆಇಇ ಮೇನ್ಸ್‌ನಲ್ಲಿ ಪ್ರತಿಭಾನ್ವಿತ ಜ್ಞಾನ ಸುಧಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು

Date:

ರೂ. 3.075 ಲಕ್ಷ ಪ್ರೋತ್ಸಾಹಧನ ವಿತರಣೆ

ನಾಲ್ಕು ವಿದ್ಯಾರ್ಥಿಗಳಿಗೆ ತಲಾ 50 ಸಾವಿರ ರೂಪಾಯಿ ನಗದು ಪುರಸ್ಕಾರ

ಕಾರ್ಕಳ: ತಂದೆ-ತಾಯಿ-ಗುರುಗಳಿಗೆ ವಂದಿಸಿ ಪಡೆದ ವಿದ್ಯೆಯು ವಿದ್ಯಾರ್ಥಿಯ ಸಾಧನೆಗೆ ಕಾರಣವಾಗುತ್ತದೆ. ಸಂಕಲ್ಪ ಶುದ್ಧದಿಂದ ಇಟ್ಟಹೆಜ್ಜೆಯು ಯಶಸ್ಸನ್ನೇ ತಂದುಕೊಡುತ್ತದೆ. ಯಶಸ್ವಿ ಬದುಕಿನ ಸಾರ್ಥಕತೆ ಪೋಷಕರದಾಗುತ್ತದೆ ಎಂದು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಹೇಳಿದರು. ಅವರು ರಾಷ್ಟಿಯ ಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕೆ ಎನ್.ಟಿ.ಎ ನಡೆಸಿದ ಪ್ರಥಮ ಹಂತದ ಜೆ.ಇ.ಇ ಮೈನ್ ಫಲಿತಾಂಶದಲ್ಲಿ 97ಕ್ಕೂ ಅಧಿಕ ಪರ್ಸಂಟೈಲ್ ಗಳಿಸಿದ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 47 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು. ಸಾಧಕರಿಗೆ ಸನ್ಮಾನ ಹಾಗೂ ನಗದು ಪುರಸ್ಕಾರ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ವತಿಯಿಂದ 99.6ಕ್ಕೂ ಅಧಿಕ ಪರ್ಸಂಟೈಲ್ ಗಳಿಸಿದ ಸಾಧಕ ವಿದ್ಯಾರ್ಥಿಗಳಾದ ಧನುಶ್ ನಾಯಕ್, ತರುಣ್ ಎ. ಸುರಾನ, ಚಿಂತನ್ ಜೆ. ಎಂ ಮತ್ತು ಆಕಾಶ್ ಎಚ್ ಪ್ರಭು ಇವರಿಗೆ ತಲಾ 50 ಸಾವಿರ ರೂಪಾಯಿಯನ್ನು, 99ಕ್ಕೂ ಅಧಿಕ ಪರ್ಸಂಟೈಲ್ ಗಳಿಸಿದ ಹೃತ್ವಿಕ್ ಶೆಟ್ಟಿ, ಮನೋಜ್ ಕಾಮತ್, ವೇದಾಂತ್ ಶೆಟ್ಟಿ ಮತ್ತು ಸತೀಶ್ ಎಸ್.ಕೆ. ಇವರಿಗೆ ತಲಾ 20 ಸಾವಿರ ರೂಪಾಯಿ ನೀಡಿ ಗೌರವಿಸಲಾಯಿತು. 98ಕ್ಕೂ ಅಧಿಕ ಪರ್ಸಂಟೈಲ್ ಗಳಿಸಿದ ಸಾಧಕ ವಿದ್ಯಾರ್ಥಿಗಳಾದ ಪ್ರೇರಣ್ ಕೆ..ಎ, ವಿಷ್ಣು ಧರ್ಮ ಪ್ರಕಾಶ್,
ಸನತ್.ವಿ..ರಾವ್, ಅಪೂರ್ವ್ ವಿ.ಕುಮಾರ್, ಚಿರಾಗ್ ಆರ್ ಶೆರಿಗಾರ್, ಮನೋಜ್ ಎಸ್.ಎ, ಅಮರ್ಥ್ಯ ಭಟ್, ಅಮೋಘ್ ಎ, ಸರ್ವಜಿತ್ ಕೆ.ಆರ್. ಅದ್ವೆಂತ್ ಬೀಡು, ಆದಿತ್ಯ ಕೃಷ್ಣ ಟಿ., ಸೃಷ್ಠಿ, ಸಿದ್ಧಾರ್ಥ್ ಎ, ಅಭಿರಾಮ್ ತೇಜ ಪಿ, ಆದಿತ್ಯ ಅಡಿಗ, ಹರ್ಷಿತ್, ಮಯೂರ್ ಎಂ ಗೌಡ.,

97ಕ್ಕೂ ಅಧಿಕ ಪರ್ಸಂಟೈಲ್ ಗಳಿಸಿದ ಶ್ರೀಹರಿ ಎಸ್.ಜಿ.ಯವ ತನ್ಮಯ್ ಜಿ.ಎಸ್, ಆಕಾಶ್ ಡಿ, ಸನಿಹ ದೇವಾಡಿಗ, ವಿಷ್ಣು ಜಿ.ನಾಯಕ್, ಪ್ರಣೀತ್ ನಾಯಕ್, ವಿಶ್ವಾಸ್ ಆರ್ ಆತ್ರೇಯಾಸ್, ನಿರಂಜನ್ ಎಂ. ಕೆ, ಶ್ರಾವ್ಯ, ಪ್ರತೀಕ್ ನಾಯಕ್, ವೈಷ್ಣವಿ ಶೆಟ್ಟಿ, ನಿಹಾರ್ ಜೆ. ಎಸ್, ಗೌರವ್ ಎನ್, ಹರ್ಷಾ ಯು ಪೂಜಾರಿ, ಚಿರಾಗ್ ಶೆಟ್ಟಿ ಬಿ, ವಿನುತ್ ನಾಯ್ಕವಾಡಿ, ಚೈತನ್ಯ ಎನ್. ಭಟ್, ರಕ್ಷಿತ್, ಉತ್ಸವ್ ಸಿ. ಪಟೇಲ್, ರಿಯಾ ರೀಶಾಲ್ ಡಿಸೋಜ, ವರುಣ್ ಪ್ರಭು ಮತ್ತು ದ್ರುವ ಗಂಗಾಧರ್ ವಾಲಿ ಇವರನ್ನು ತಲಾ ಒಂದು ಸಾವಿರ ನಗದು ನೀಡಿ ಸನ್ಮಾನಿಸಲಾಯಿತು. ಜೆ.ಇ.ಇ ಮೈನ್ ಮೊದಲ ಹಂತದ ಪರೀಕ್ಷಾ ಫಲಿತಾಂಶದಲ್ಲಿ ಜ್ಞಾನಸುಧಾದ 4 ವಿದ್ಯಾರ್ಥಿಗಳು 99.6ಕ್ಕೂ ಅಧಿಕ ಪರ್ಸಂಟೈಲ್, 8 ವಿದ್ಯಾರ್ಥಿಗಳು 99ಕ್ಕೂ ಅಧಿಕ ಪರ್ಸಂಟೈಲ್, 25 ವಿದ್ಯಾರ್ಥಿಗಳು 98 ಪರ್ಸಂಟೈಲ್‌ಗಿಂತ ಅಧಿಕ, 47 ವಿದ್ಯಾರ್ಥಿಗಳು 97 ಪರ್ಸಂಟೈಲ್‌ಗಿಂತ ಅಧಿಕ, 98 ವಿದ್ಯಾರ್ಥಿಗಳು 95ಕ್ಕಿಂತ ಅಧಿಕ ಪರ್ಸಂಟೈಲ್, 194 ವಿದ್ಯಾರ್ಥಿಗಳು 90 ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿರುತ್ತಾರೆ. ವೇದಿಕೆಯಲ್ಲಿ ಎ.ಪಿ.ಜಿ.ಇ.ಟಿ. ಟ್ರಸ್ಟಿ ಶ್ರೀ ಅನಿಲ್ ಕುಮಾರ್ ಜೈನ್, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಒ ಹಾಗೂ ಪ್ರಾಂಶುಪಾಲರಾದ ಶ್ರೀ ದಿನೇಶ್ ಎಂ.ಕೊಡವೂರ್, ಉಡುಪಿ ಜ್ಞಾನಸುಧಾ ಪ.ಪೂ.ಕಾಲೇಜಿನ ಪ್ರಾಂಶುಪಾಲ ಶ್ರೀ ಸಂತೋಷ್, ಕಾರ್ಕಳ ಜ್ಞಾನಸುಧಾ ಪ.ಪೂ. ಉಪಪ್ರಾಂಶುಪಾಲರುಗಳಾದ ಶ್ರೀ ಸಾಹಿತ್ಯ, ಶ್ರೀಮತಿ ಉಷಾ ರಾವ್ ಯು, ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಉಪಪ್ರಾಂಶುಪಾಲೆ ಶ್ರೀಮತಿ ವಾಣಿ ಕೆ., ಪಿ.ಆರ್.ಒ ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿ, ವಿದ್ಯಾರ್ಥಿಗಳ ಶೈಕ್ಷಣಿಕ ವ್ಯವಹಾರಗಳ ಡೀನ್ ಡಾ.ಮಿಥುನ್ ಯು, ಡೀನ್ ಸ್ಟೂಡೆಂಟ್ಸ್ ಅಫೈರ್ ಶ್ರೀಮತಿ ಶಕುಂತಲಾ ಎಂ ಸುವರ್ಣ, ಜ್ಞಾನಸುಧಾ ಎಂಟ್ರನ್ಸ್ ಅಕಾಡೆಮಿಯ ಮುಖ್ಯ ಸಂಯೋಜಕ ಹಾಗೂ ಕಾರ್ಕಳ ಜ್ಞಾನಸುಧಾ ಪ.ಪೂ.ಕಾಲೇಜಿನ ಗಣಿತಶಾಸ್ತ ವಿಭಾಗದ ಮುಖ್ಯಸ್ಥ ಶ್ರೀ ಸಂದೀಪ, ಕಾರ್ಕಳ ಜ್ಞಾನಸುಧಾದ ಭೌತಶಾಸ್ತ ವಿಭಾಗದ ಮುಖ್ಯಸ್ಥ ಶ್ರೀ ಅಭೀಶ್ ಜೈನ್, ಉಡುಪಿಯ ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಸಹಸಂಯೋಜಕ ಶ್ರೀ ಪ್ರವೀಣ್ ಜಾನ್ ಡಿ. ಅಲ್ಮೆಡಾ, ಉಡುಪಿ ಜ್ಞಾನಸುಧಾ ಪ.ಪೂ.ಕಾಲೇಜಿನ ರಸಾಯನ ಶಾಸ್ತ ವಿಭಾಗದ ಮುಖ್ಯಸ್ಥ ಶ್ರೀನಿಧಿ ಭಾಗವತ್, ಕಾರ್ಕಳ ಜ್ಞಾನಸುಧಾ ಪ.ಪೂ.ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಜ್ಞಾನಗೋಪಾಲ ವಿದ್ಯಾರ್ಥಿನಿಲಯದ ಮುಖ್ಯ ನಿಲಯಪಾಲಕ ಶ್ರೀ ಮಂಜುನಾಥ ಮುದ್ರಾಡಿ, ಜೀವಶಾಸ್ತ ವಿಭಾಗದ ಮುಖ್ಯಸ್ಥೆ ಶ್ರೀಮತಿ ಜೂಲಿಯೆಟ್ ಬಬಿತಾ ಕ್ವಾಡ್ರಸ್, ಜ್ಞಾನಪದ್ಮ ವಿದ್ಯಾರ್ಥಿ ನಿಲಯದ ಮುಖ್ಯ ನಿಲಯಪಾಲಕಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕಿ ಶ್ರೀಮತಿ ಸೌಜನ್ಯ ಹೆಗ್ಡೆ, ಹಿತೈಶಿ ಶ್ರೀ ತ್ರಿವಿಕ್ರಮ ಕಿಣಿ ಉಪಸ್ಥಿತರಿದ್ದರು. ರಸಾಯನಶಾಸ್ತ ವಿಭಾಗದ ಮುಖ್ಯಸ್ಥ ಡಾ.ಪ್ರಜ್ವಲ್ ಕುಲಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ರಿಯಲ್‌ಮಿ ನಿಯೋ 7 ಟರ್ಬೋ AI ಬಿಡುಗಡೆ: ಗೇಮರ್‌ಗಳಿಗಾಗಿ ಮೀಡಿಯಾಟೆಕ್ ಡೈಮನ್ಸಿಟಿ 9400e ಪ್ರೊಸೆಸರ್‌ನ ಫೋನ್

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ಗೇಮಿಂಗ್ ಮತ್ತು ಬ್ಯಾಟರಿ-ಕೇಂದ್ರಿತ ಫೋನ್‌ಗಳಿಂದ ಹೆಸರುವಾಸಿಯಾಗಿರುವ ರಿಯಲ್ಮಿ, ಈಗ ತನ್ನ ನಿಯೋ ಸರಣಿಗೆ ಹೊಸ ಸೇರ್ಪಡೆಯನ್ನು ಮಾಡಿದೆ.

ಪೆರ್ಡೂರು: ಶಾಲಾ ಬಸ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ – ಮತ್ತೊಬ್ಬನಿಗೆ ಗಂಭೀರ ಗಾಯ

ಪೆರ್ಡೂರು ಗ್ರಾಮದ ಕೊಳಂಬೆ ಕ್ರಾಸ್ ಬಳಿ ಶಾಲಾ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ.

ಉಡುಪಿ ರಸ್ತೆ ಅಪಘಾತ: ಬೈಕ್ ಸ್ಕಿಡ್ ಆಗಿ ಯುವಕನ ದುರ್ಮರಣ, ಸಹಸವಾರ ಗಂಭೀರ

ಬೈಕ್ ಸ್ಕಿಡ್ ಆಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸಹಸವಾರ ಸಾವನ್ನಪ್ಪಿದ್ದು, ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಮಧುಮೇಹ ಮತ್ತು ಬೊಜ್ಜು ನಿಯಂತ್ರಣಕ್ಕೆ ದಾಸವಾಳ: ಪ್ರಕೃತಿಯ ವರದಾನ

ದಾಸವಾಳದ ಎಲೆಗಳು, ಹೂವುಗಳು ಮತ್ತು ಬೇರುಗಳು ವೈವಿಧ್ಯಮಯ ಪೋಷಕಾಂಶಗಳು ಮತ್ತು ಜೈವಿಕ ಸಕ್ರಿಯ ಸಂಯುಕ್ತಗಳಿಂದ ಸಮೃದ್ಧವಾಗಿವೆ.