
ನೀಲಮ ಸಂಜೀವ ರೆಡ್ಡಿ
ಭಾರತದ ಆರನೇ ರಾಷ್ಟ್ರಪತಿಗಳಾದ ನೀಲಮ ಸಂಜೀವ ರೆಡ್ಡಿಯವರು 1913ರ ಮೇ 19 ರಂದು ಇವತ್ತಿನ ಆಂಧ್ರ ಪ್ರದೇಶದ ಅನಂತಪುರದಲ್ಲಿ ಜನಿಸಿದರು. ಮಹಾತ್ಮ ಗಾಂಧಿಯವರ ಸ್ವಾತಂತ್ರ್ಯ ಚಳುವಳಿಗೆ ಮನಸೋತು ತನ್ನನ್ನು ಸ್ವಾತಂತ್ರ್ಯ ಚಳುವಳಿಗೆ ಸಮರ್ಪಿಸಿಕೊಂಡರು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಉಪಮುಖ್ಯಮಂತ್ರಿಯಿಂದ ಹಿಡಿದು ರಾಷ್ಟ್ರಪತಿಯವರೆಗೆ ಅನೇಕ ಅಧಿಕಾರಗಳನ್ನು ಸಮರ್ಥವಾಗಿ ನಿಭಾಯಿಸಿದವರು.ಅವರು 1977 ರಿಂದ 1982 ರವರೆಗೆ ಭಾರತದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು.

ರಾಷ್ಟ್ರಪತಿಯಾಗುವ ಮೊದಲು ಆಂಧ್ರ ರಾಜ್ಯದ ಉಪಮುಖ್ಯಮಂತ್ರಿ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ , ಎರಡು ಬಾರಿ ಲೋಕಸಭೆಯ ಸ್ಪೀಕರ್ ಮತ್ತು ಕೇಂದ್ರ ಸಚಿವರಾಗಿದ್ದರು. ಅದರಲ್ಲೂ ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಇಂದಿರಾಗಾಂಧಿಯವರ ಅಧಿಕಾರದ ಅಡಿಯಲ್ಲಿ ಕೇಂದ್ರ ಸಚಿವರಾಗಿ ಗುರುತಿಸಿಕೊಂಡವರು. ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾನಿಲಯವು ಇವರ ಹಲವು ಸಾಧನೆಗಳಲ್ಲಿ ಒಂದು. ಈ ಸಾಧನೆಯ ಕುರಿತಾಗಿಯೇ ಅವರಿಗೆ ಗೌರವ ಡಾಕ್ಟರೇಟ್ ಕೂಡ ಸಿಕ್ಕಿತ್ತು. ಕೊನೆಗೆ 1996ರ ಜೂನ್ ಒಂದರಂದು ಬೆಂಗಳೂರಿನಲ್ಲಿ ತನ್ನ ದೇಹವನ್ನು ನ್ಯುಮೋನಿಯಾ ರೋಗದಿಂದ ಪಡೆದುಕೊಂಡರು
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ