spot_img

ದಿನ ವಿಶೇಷ – ಫೆರುಸ್ಸಿಯೊ ಲಂಬೋರ್ಘಿನಿ

Date:

ಫೆರುಸ್ಸಿಯೊ ಲಂಬೋರ್ಘಿನಿ

ಲ್ಯಾಂಬೋರ್ಗಿನಿ, ಕಾರ್ ಪ್ರಿಯರಿಗೆ ಈ ಹೆಸರು ಗೊತ್ತಿರದೆ ಇಲ್ಲ. ಅಷ್ಟರ ಮಟ್ಟಿಗೆ ಕಾರಿನ ಲೋಕದಲ್ಲಿ ಹೊಸ ವಿಸ್ಮಯವನ್ನು ಹುಟ್ಟಿಸಿದವರು ಫೆರುಸ್ಸಿಯೊ ಲಂಬೋರ್ಘಿನಿ. ದುಬಾರಿ ಕಾರುಗಳಲ್ಲಿ ಗುರುತಿಸಲ್ಪಡುವ ಹೆಸರುಗಳಲ್ಲಿ ಇದು ಕೂಡ ಒಂದು. ಇಟಲಿಯ ಸೆಂಟೋ ಎನ್ನುವಲ್ಲಿ 1916 ಏಪ್ರಿಲ್ 28ರಂದು ಕೃಷಿಕ ಪರಂಪರೆಯಲ್ಲಿ ಹುಟ್ಟಿದವರು. ಚಿಕ್ಕಂದಿನಿಂದಲೂ ಕಾರು ಇತ್ಯಾದಿ, ಉಪಕರಣಗಳಲ್ಲಿ ಅದರ ರಿಪೇರಿಗಳಲ್ಲಿ ಬಹಳಷ್ಟು ಆಸಕ್ತಿ ವಹಿಸಿದ್ದರು. ಮೊದಲು ಸ್ಥಾಪಿಸಿದ್ದೆ ಇವರು ಕೃಷಿ ಸಂಬಂಧವಾದ ಉಪಕರಣಗಳನ್ನು ತಯಾರಿಸುವ ಕಾರ್ಖಾನೆಯನ್ನು.

ಆ ಮೂಲಕವೇ ಟ್ರ್ಯಾಕ್ಟರ್ ಬೆಳಕಿಗೆ ಬಂದದ್ದು. ಸುಮಾರು ನಾಲ್ಕು ಕಾರ್ಖಾನೆಗಳನ್ನು ಸ್ಥಾಪಿಸಿ ಅದೆಲ್ಲವನ್ನು ಪರಭಾರೆ ಮಾಡಿ ತನ್ನ 70ನೇ ವಯಸ್ಸಿನಲ್ಲಿ ದ್ರಾಕ್ಷಾ ರಸದ ಕೃಷಿಯಿಂದ ವೈನ್ ಕಾರ್ಖಾನೆಯನ್ನು ಸ್ಥಾಪಿಸಿ ಕೊನೆಯ ತನಕ ಆ ಮೂಲಕ ಜೀವನ ನಿರ್ವಹಣೆ ಮಾಡಿಕೊಂಡರು. 1993ರಲ್ಲಿ ಹೃದಯಘಾತದಿಂದ ಕೊನೆಯುಸಿರೆಳೆದರು. ತನ್ನ ಛಲ ಹಾಗೂ ಪರಿಶ್ರಮದಿಂದ ಇವತ್ತಿಗೂ ತನ್ನ ಹೆಸರನ್ನು ಉಳಿಸಿಕೊಂಡಿದ್ದಾರೆ. ಕಂಡ ಕನಸು ನನಸಾಗಿಸುವಲ್ಲಿ ಅವಿರತವಾದ ಪರಿಶ್ರಮದಿಂದ ಹೋರಾಡಿದ್ದಾರೆ. ಅವರ ಹುಟ್ಟಿದ ದಿನ ಆ ಗುಣಗಳು ನಮ್ಮಲ್ಲಿ ಉಳಿಯಬೇಕು ಬೆಳೆಯಬೇಕು.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪಹಲ್ಗಾಮ್ ದಾಳಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಟು ಖಂಡನೆ!

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಕಟುವಾಗಿ ಖಂಡಿಸಿದೆ

ಪಾಕಿಸ್ಥಾನದೊಂದಿಗೆ ಯುದ್ಧ ಬೇಡ? ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಬಿಸಿ ಪ್ರತಿಕ್ರಿಯೆ

ಪಾಕಿಸ್ಥಾನದೊಂದಿಗೆ ಯುದ್ಧದ ಪರ್ಯಾಯಗಳ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ಬಿಸಿ ಬಿಸಿ ಎಳನೀರಿನ ಟೀ! ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅನನ್ಯವಾದ ಚಹಾ ತಯಾರಿಕೆ

ಮಹಿಳೆಯೊಬ್ಬಳು ನೀರಿನ ಬದಲು ಎಳನೀರು (ತೆಂಗಿನಕಾಯಿಯ ತಾಜಾ ನೀರು) ಬಳಸಿ ಚಹಾ ತಯಾರಿಸುವ ದೃಶ್ಯವನ್ನು ಕಾಣಬಹುದು

ಭದ್ರತಾ ಕಾರ್ಯಾಚರಣೆಗಳ ನೇರ ಪ್ರಸಾರ ಮಾಡಬೇಡಿ: ಕೇಂದ್ರ ಸರ್ಕಾರದ ಮಾಧ್ಯಮಗಳಿಗೆ ಸಲಹೆ

ಜಮ್ಮು-ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆಗಳ ನೇರಪ್ರಸಾರ ಮಾಡಬಾರದು ಎಂದು ಕೇಂದ್ರ ಸರ್ಕಾರ ಮಾಧ್ಯಮಗಳಿಗೆ ಸಲಹೆ ನೀಡಿದೆ