
ಬೆನೋ ಜೆಫಿನ್
ಭಾರತ ವಿಸ್ಮಯಗಳ ತವರೂರು. ಇಲ್ಲಿ ಪ್ರತಿ 100ರಲ್ಲಿ ಒಬ್ಬ ಅತ್ಯಂತ ವಿಶೇಷ ಶಕ್ತಿಯುಳ್ಳವರಿದ್ದಾರೆ. ಅಂತದ್ದೇ ಒಂದು ವಿಶೇಷ ವ್ಯಕ್ತಿ ಬೆನೋ ಜಫಿನ್. 1990 ಏಪ್ರಿಲ್ 17 ರಂದು ಇವರು ಜನಿಸಿದರು. ಹುಟ್ಟಿ ಸ್ವಲ್ಪ ಸಮಯದಲ್ಲಿ ಕಣ್ಣನ್ನು ಕಳೆದುಕೊಂಡ ಪರಿಣಾಮ ಅಂಧರ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ
ಇವತ್ತು IFS ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ. ಭಾರತದ ಮೊದಲ ಅಂಧ ದೃಷ್ಟಿಹೀನ ಐ ಎಫ್ ಎಸ್ ಅಧಿಕಾರಿ ಇವರು ಎನ್ನುವ ಹೆಮ್ಮೆ ಇವರದ್ದು. ಭಾರತದಲ್ಲಿ ಸಾಧನೆಯ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ.

ಸಾಧನೆಗೆ ಯಾವುದೇ ಅಗತ್ಯವಿಲ್ಲ ಎನ್ನುವುದಕ್ಕೆ ಇವರು ದೊಡ್ಡ ಸಾಕ್ಷಿ. ಶ್ರೀಯುತ ಜಗದ್ಗುರುಗಳಾದ ರಾಮಭದ್ರಾಚಾರ್ಯರು ಕೂಡ ಕುರುಡರಾಗಿದ್ದುಕೊಂಡು ಬಹಳ ದೊಡ್ಡ ವಿದ್ವಾಂಸರಾಗಿ ಗುರುತಿಸಿಕೊಂಡಿದ್ದಾರೆ. ಸ್ವಂತ ವಿಶ್ವವಿದ್ಯಾನಿಲಯವನ್ನು ಕಟ್ಟಿಕೊಂಡಿದ್ದಾರೆ. ಅದೇ ರೀತಿಯಲ್ಲಿ ಈ ಹೆಣ್ಣುಮಗಳು ಕೂಡ ಮನೆಯವರು ಪ್ರತಿಯೊಂದು ವಿಚಾರವನ್ನು ಓದಿ ಹೇಳುತ್ತಿದ್ದರು ಅದನ್ನು ಶ್ರದ್ಧೆಯಿಂದ ಕೇಳಿ ನೆನಪಿಟ್ಟುಕೊಂಡು ದೊಡ್ಡ ಮೈಲುಗಲ್ಲನ್ನು ಹೊರಟಿಸಿದ್ದಾರೆ. ಅವರ ಹುಟ್ಟಿದ ದಿವಸ ಅವರ ಸ್ಪೂರ್ತಿ ನಮ್ಮಲ್ಲಿ ಹುಟ್ಟಲಿ ಎನ್ನುವ ಆಶಯವಷ್ಟೇ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ