
ನಗುಮುಖದಿಂದ ಇರುವುದು ದೊಡ್ಡ ಯೋಗ. ಎಲ್ಲರಿಗೂ ಹಾಗಿರಲು ಸಾಧ್ಯವಾಗುವುದಿಲ್ಲ. ಏಕೆಂದರೆ ಕೆಲವರಿಗೆ ಅವರ ಇಷ್ಟದವರನ್ನು ಕಂಡಾಗ ಮಾತ್ರ ನಗು ಬರುತ್ತದೆ. ಇನ್ನು ಕೆಲವರಿಗೆ ತಮಾಷೆಯ ವಿಚಾರವನ್ನು ಕೇಳುವಾಗ ಮಾತ್ರ ನಗು ಬರುತ್ತದೆ. ಕೆಲವರಂತೂ ಯಾವುದಕ್ಕೂ ಕೂಡ ನಗದೆ ಘನ ಗಾಂಭೀರ್ಯವನ್ನು ಕಾಪಾಡಿಕೊಳ್ಳುತ್ತಾರೆ. ಆದರೆ ಕೆಲವರು ಮಾತ್ರ ನಗುತ್ತಲೇ ಇರುತ್ತಾರೆ. ಪ್ರಯತ್ನ ಪಟ್ಟರು ಈ ನಗು ಮುಖದಿಂದ ಇರುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಅದು ತಾನಾಗಿ ನಮ್ಮೊಳಗಿಂದ ಹಲವು ಗುಣಗಳಂತೆ ಇದ್ದರೆ ಮಾತ್ರ ಪ್ರಕಟವಾಗಬಹುದು. ಭಗವಾನ್ ರಾಮ ಹಾಗೂ ಕೃಷ್ಣರು ಎಲ್ಲಾ ಕಾಲಕ್ಕೂ ನಗು ಮುಖದಿಂದಲೇ ಇದ್ದರು. ಸುಖ ಬಂದಾಗ ನಗುವುದು ಸುಲಭ. ಆದರೆ ದುಃಖದಲ್ಲೂ ನಗುವುದು ಕಷ್ಟ. ಆ ಕಾರಣಕ್ಕಾಗಿಯೇ ಅದನ್ನು ಉಳಿಸಿಕೊಳ್ಳಬೇಕು ಬೆಳೆಸಿಕೊಳ್ಳಬೇಕು ಎನ್ನುವುದಕ್ಕಾಗಿ ಈ ದಿನ ಸೀಮಿತವಾಗಿದೆ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ