
ಯುಗಾದಿ ಹಬ್ಬ
“ನವಪ್ರಕಾಶಂ ನವ ಚೈತನ್ಯಂ
ನವಹರ್ಷಮ್ ನವ ಸಾಮರ್ಥ್ಯಮ್
ಆಯಾತು ನವ ವರ್ಷಃ
ಏಷಃ ಗೃಹೀತ್ವಾ ನವಮಾಂಗಲ್ಯಮ್“
ಮೇಷ ಮಾಸದ ಮೊದಲ ದಿವಸ ಈ ವರ್ಷದ ಮೊದಲ ದಿವಸ. ಸೌರಮಾನದ ಪ್ರಕಾರ ಇವತ್ತು ಯುಗಾದಿಯ ಹಬ್ಬ. ಯುಗದ ಪ್ರಾರಂಭ ಎನ್ನುವುದು ಪೌರಾಣಿಕ ಹಿನ್ನೆಲೆಯಾದರೆ ನವ ಜೀವನದ ಪ್ರಾರಂಭ ಎನ್ನುವುದು ಜೀವನದ ಸತ್ಯ. ಪ್ರತಿದಿನವೂ ಬೆಳಗ್ಗೆ ಹೇಳುವಾಗ ಹೊಸತರಲ್ಲಿ ಹೇಳುವ ನಾವು ಹೊಸ ವರುಷವನ್ನು ಮತ್ತಷ್ಟು ಆನಂದಿಸುತ್ತೇವೆ. ನಮಗೆ ನಮ್ಮ ಸಾಧನೆಗೆ ಇನ್ನೊಂದು ವರ್ಷ ಸೇರಿತು ಎನ್ನುವ ಹರ್ಷವಾದರೆ, ಕಳೆದ ಸಮಯದ ವ್ಯರ್ಥತೆಯ ಬಗ್ಗೆ ಬೇಸರವೂ ಕೂಡ ಸಣ್ಣದಾಗಿ ಮೂಡಿರುತ್ತದೆ. ಅದನ್ನು ಸರಿಪಡಿಸಿಕೊಂಡು ಸಾಗುವ ಅಗತ್ಯ ಹೊಸ ವರ್ಷದಲ್ಲಿರುತ್ತದೆ.

ಆದ್ದರಿಂದಲೇ ಯುಗಯುಗ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಎನ್ನುವ ಸಂದೇಶ ನಮಗೆ ನವ ಜೀವನದ ಉತ್ಸಾಹವನ್ನು ತಂದುಕೊಡುತ್ತದೆ. ದೇಶದ ಬಹಳಷ್ಟು ಕಡೆ ಸೂರ್ಯನ ಗತಿಯ ಮೂಲಕ ದಿನ ಚಿಂತನೆ ನಡೆಯುವುದರಿಂದ ಈ ದಿವಸ ಯುಗಾದಿಯನ್ನು ಆಚರಿಸುವ ಸಂಖ್ಯೆ ಬಹಳಷ್ಟಿದೆ. ಬೇವು ಬೆಲ್ಲದ ಮೂಲಕ ಕಹಿ ಸಿಹಿ ಜೀವನ ಎನ್ನುವ ಅನುಸಂಧಾನವನ್ನು ಇಟ್ಟುಕೊಂಡು ಅದರೊಟ್ಟಿಗೆ ಕಹಿಸಾಮಾನ್ಯವಾಗಿ ಸಿಗುತ್ತದೆ ಆದರೆ ಸಿಹಿಯನ್ನು ಪ್ರಯತ್ನ ಪೂರ್ವಕವಾಗಿ ಪಡೆದುಕೊಳ್ಳಬೇಕು ಎನ್ನುವ ಇದರ ಹಿಂದಿನ ಕಾರಣದೊಂದಿಗೆ ಬದುಕು ಸಾಗಲಿ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ