
ಕ್ಷಯ ಎನ್ನುವ ಹೆಸರೇ ನಾಶವನ್ನು ಸೂಚಿಸುತ್ತದೆ.ಉಸಿರಾಟಕ್ಕೆ ತೊಂದರೆ ಕೊಡುವ ಮೂಲಕ ಈ ರೋಗ ನಮ್ಮನ್ನು ಸಾವಿನತ್ತ ಕೊಂಡುಯ್ಯುತ್ತದೆ. 2017ರಲ್ಲಿ ಈ ರೋಗಕ್ಕೆ ತುತ್ತಾಗಿ ಸುಮಾರು ಐದು ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಒಂದೂವರೆ ಕೋಟಿಗೂ ಮಿಕ್ಕಿ ಬಳಲಿದ್ದಾರೆ. ಆದರೆ 150 ವರ್ಷದ ಹಿಂದೆಯೇ ಡಾಕ್ಟರ್ ರಾಬರ್ಟ್ ಕೋಚ್ ಈ ರೋಗದ ಬಗ್ಗೆ ಸಂಶೋಧನೆ ಮಾಡಿ ಒಂದು ಮಟ್ಟಿನ ಔಷಧಿಯನ್ನು ಕಂಡು ಹಿಡಿದಿದ್ದಾನೆ ಆ ನೆನಪಿನಲ್ಲಿ 1882 ರಿಂದ ಈ ದಿವಸವನ್ನು ಕ್ಷಯ ರೋಗದ ದಿವಸ ಎಂದು ಎಂದು ಆಚರಿಸಿ ಆ ರೋಗದ ಬಗ್ಗೆ ತಿಳುವಳಿಕೆಯನ್ನು ಮೂಡಿಸುತ್ತಿದ್ದಾರೆ. ಉಸಿರಾಟಕ್ಕೆ ಇರುವ ತೊಂದರೆಗಳಿಗೆ ಮೂಲ ಈ ರೋಗ.

ಸುಪ್ತಕ್ಷಯ ಹಾಗೂ ಸಕ್ರಿಯ ಕ್ಷಯ ಎನ್ನುವ ಎರಡು ರೀತಿಗಳಿವೆ. ಏನಿದ್ದರೂ ಕೂಡ ಗೊತ್ತು ಮಾಡಿಕೊಂಡು ಕನಿಷ್ಠ ಒಂದು ವರ್ಷಗಳಷ್ಟು ಕಾಲ ಔಷಧಿ ಸೇವನೆ ಹಾಗೂ ಪತ್ಯಾದಿಗಳನ್ನು ಮಾಡಿದರೆ ಮಾತ್ರ ಈ ರೋಗ ಗುಣವಾಗುತ್ತದೆ.ಈ ದೇಶದಲ್ಲಿ ಸುಮಾರು 400 ವರ್ಷಗಳ ಹಿಂದೆಯೇ ಈ ರೋಗದ ಕುರಿತು ಉಲ್ಲೇಖವಿದೆ. ಜನ್ಮಾಂತರದಲ್ಲಿ ಮಾಡಿದ ಗುರು ನಿಂದೆ, ಗುರು ದ್ರೋಹ, ಗುರು ದ್ವೇಷ ಹಾಗೂ ಸ್ತ್ರೀ ಪರವಾದ ಪಾಪ ಕೃತ್ಯಗಳಿಂದ ಈ ರೋಗ ಬರುತ್ತದೆ ಅದಕ್ಕೆ ಸರಿಯಾದ ಪ್ರಾಯಶ್ಚಿತವನ್ನು ಮಾಡಿಕೊಂಡು ಔಷಧವನ್ನು ಸ್ವೀಕಾರ ಮಾಡಿದರೆ ಈ ರೋಗ ಗುಣಮುಖವಾಗುತ್ತದೆ ಎನ್ನುವ ಬಗ್ಗೆ ಕರ್ಮ ವಿಪಾಕ ಎನ್ನುವ ಗ್ರಂಥದಲ್ಲಿ ನಿರ್ದೇಶನವಿದೆ. ರೋಗಗಳು ಯಾವುದೇ ಇರಲಿ ಅನುಭವಿಸುವ ಕಾಲ ಬಂದಾಗ ಅದು ಹತ್ತಿರವಾಗುತ್ತದೆ ಅನುಭವಿಸಲೇ ಬೇಕಾಗುತ್ತದೆ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ