
ಪರಶುರಾಮ ಜಯಂತಿ
ಭಗವಾನ್ ವಿಷ್ಣುವಿನ ದಶಾವತಾರಗಳಲ್ಲಿ ಆರನೆಯ ಅವತಾರ. ಜಮದಗ್ನಿ ರೇಣುಕಾ ದಂಪತಿಗಳ ಪುತ್ರನಾಗಿ ರಾಮ ಎನ್ನುವ ಹೆಸರಿನಿಂದ ಹುಟ್ಟಿದ. ಕೊಡಲಿ ತನ್ನ ಆಯುಧವಾದ್ದರಿಂದ ಪರಶುರಾಮ ಅನ್ವರ್ಥವಾಯಿತು. ಭೃಗು ವಂಶದಲ್ಲಿ ಬಂದವನಾದ್ದರಿಂದ ಭಾರ್ಗವ ರಾಮ ಎಂದು ಕರೆಯಿಸಿಕೊಂಡ. ತಾಯಿ ರೇಣುಕಯ್ಯ ಅನೈತಿಕವಾದ ಕಾರ್ಯಕ್ಕೆ ಕೋಪಗೊಂಡ ತಂದೆ ಜಮದಗ್ನಿ ತಾಯಿಯನ್ನು ಕೊಲ್ಲುವಂತೆ ಪರಶುರಾಮನಲ್ಲಿ ಹೇಳಿದಾಗ ತಪ್ಪಿಗೆ ಪ್ರಾಯಶ್ಚಿತ ರೂಪದಲ್ಲಿ ನಡೆಯಬೇಕಾದ ಈ ಪ್ರಕ್ರಿಯೆಗೆ ವಿರೋಧಿಸದೆ ಮಾತ್ರವಲ್ಲ ತಾಯಿಯನ್ನು ಮತ್ತೊಮ್ಮೆ ಬದುಕಿಸುತ್ತೇನೆ ಎನ್ನುವ ನಿಶ್ಚಯವಾದ ನಂಬಿಕೆಯಿಂದ ತಂದೆಯ ಮಾತಿಗೆ ವಿರೋಧಿಸದೆ ತಾಯಿಯ ತಲೆ ಕಡಿದು ಮತ್ತೆ ತಂದೆಯ ವರದಾನದ ಮೂಲಕ ತಾಯಿಯನ್ನು ತಿರುಗಿ ಪಡೆದ. ತಾಯಿಯ ತಪ್ಪಿಗೆ ಪ್ರಾಯಶ್ಚಿತ್ತವಾಯಿತು.

ತಂದೆಯ ಕೋಪವು ಶಮನವಾಯಿತು. ಪರಶುರಾಮನಲ್ಲದೆ ಇದನ್ನು ಮತ್ತಾರಿಗೆ ಮಾಡಲು ಸಾಧ್ಯ. ತಂದೆಯನ್ನು ಕೊಂದ ಕಾರ್ತವೀರ್ಯಾರ್ಜುನನ ಆದಿಯಾಗಿ ಕ್ಷತ್ರಿಯರ ದೌಷ್ಠ್ಯಕ್ಕೆ ವಿರುದ್ಧವಾಗಿ ತನ್ನನ್ನು ಸಮರ್ಪಿಸಿಕೊಂಡು 21 ಬಾರಿ ಭೂ ಪ್ರದಕ್ಷಿಣೆ ಮಾಡಿ ಆ ಕಾಲದ ಎಲ್ಲಾ ದುಷ್ಟಶಕ್ತಿಗಳನ್ನು ಏಕಾಂಗಿ ವೀರನಾಗಿ ಕೊಂದು ಕಳೆದ. ಪರಶುರಾಮ ಜಯಂತಿ ಈಗ ಆಗಬೇಕಾಗಿದೆ. ಮತಾಂಧ ಪಾಪಿಗಳು ದೇಶ ತುಂಬಾ ತುಂಬುತ್ತಿದ್ದಾರೆ. ಅವರೆಲ್ಲರನ್ನು ಕೊಂದು ಕಳೆಯುವ ಏಕಾಂಗಿ ವೀರನಾಗಿ ನಮಗೊಬ್ಬ ಪರಶುರಾಮ ಬೇಕಾಗಿದೆ. ಪರಶುರಾಮ ಜಯಂತಿ ಅದನ್ನು ಸಾರ್ಥಕ ಪಡಿಸಲಿ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ