
ನಿಕೋಲಸ್ ಕೋಪರ್ನಿಕಸ್ ಶನಿಯನ್ನು ಮೊದಲು ಕಂಡರು
1514ರ ಏಪ್ರಿಲ್ 26ರಂದು ಜಗತ್ತಿನ ಮುಂದೆ ಶನಿ ಗ್ರಹದ ಕುರಿತಾಗಿ ಮೊತ್ತ ಮೊದಲ ಪ್ರಬಂಧ ಮಾಡಿದವರು ನಿಕೋಲಸ್ ಕೋಪರ್ನಿಕಸ್. ಅಷ್ಟೇ ಅಲ್ಲದೆ ಅಲ್ಲಿಯ ತನಕ ಚಾಲ್ತಿಯಲ್ಲಿದ್ದ ಕ್ರೈಸ್ತ ಹಾಗೂ ಇಸ್ಲಾಂ ಧರ್ಮ ಗ್ರಂಥದ ಆಧಾರದಲ್ಲಿರುವಂತೆ ಭೂಮಿಯ ಸುತ್ತ ಗ್ರಹಗಳು ಸುತ್ತುತ್ತವೆ ಎನ್ನುವುದಾಗಿತ್ತು. ಆದರೆ ಈ ವಿಜ್ಞಾನಿ ಗ್ರಹಗಳು ಸೂರ್ಯನ ಸುತ್ತ ಸುತ್ತುವುದು ಎನ್ನುವುದಾಗಿ ನಿರೂಪಿಸಿದ. ಅದಾಗಿ ನಂಬಿಕೆಯ ವಿರುದ್ಧವಾಗಿ ಹೇಳಿಕೆ ಕೊಟ್ಟಿದ್ದರಿಂದ ಕ್ರೈಸ್ತರಿಂದ ಬಹಳಷ್ಟು ತೊಂದರೆಗೆ ಈಡಾಗಿದ್ದಾರೆ. ಆದರೂ ಕೂಡ ತನ್ನ ನಿಲುವನ್ನು ಬದಲಿಸಿಕೊಳ್ಳದೆ ಕೊನೆಯ ತನಕವು ಅದೇ ಆಧಾರದಲ್ಲಿ ಬದುಕಿದ. ಹಾಗೆಯೇ ಸೂರ್ಯನ ಆಧಾರದಲ್ಲಿ ಹೊಸ ಗಣಿತವನ್ನು ಜಗತ್ತಿಗೆ ತೋರಿಸಿದ.

ಈ ಮಾಹಿತಿ ತನಗೆ ಸಿಗಲು ಕಾರಣವಾದದ್ದನ್ನು ಈತ ಸ್ಪಷ್ಟವಾಗಿ ಹೇಳದೆ ಇದ್ದರೂ ಕೂಡ ಈ ಎಲ್ಲಾ ಸಂಗತಿಗಳು ಭಾರತದಲ್ಲಿ ಸಾವಿರಾರು ವರ್ಷದ ಹಿಂದೆಯೇ ಭಾರತದ ಋಷಿ ಮುನಿಗಳು ಲೋಕಕ್ಕೆ ತಿಳಿಸಿದ್ದರು. ಹೇಗೆ ಕಂಬಕ್ಕೆ ಕಟ್ಟಿದ ಕುದುರೆಯೊಂದು ಸುತ್ತಲೂ ಚಲಿಸುತ್ತದೆಯೋ, ಅದೇ ರೀತಿಯಾಗಿ ಗ್ರಹಗಳು ಸೂರ್ಯನ ಕೇಂದ್ರಕ್ಕೆ ಸರಿಯಾಗಿ ಪ್ರದಕ್ಷಿಣೆ ಬರುತ್ತದೆ ಎನ್ನುವುದಾಗಿ ಋಗ್ವೇದದಲ್ಲಿ ಉಲ್ಲೇಖವಿದೆ. ಸಾವಿರಾರು ವರ್ಷಗಳಿಂದ ಭಾರತೀಯರು ನವಗ್ರಹಗಳನ್ನು ಆರಾಧಿಸುತ್ತಾರೆ. ಅದರಲ್ಲೂ ಕೂಡ ಶನಿಗೆ ಬಹಳಷ್ಟು ಮಹತ್ವ ಕೂಡವಿದೆ. ಇದೇ ನೆಲದ ಸಿದ್ಧಾಂತವನ್ನು ಆಧಾರವಾಗಿಟ್ಟುಕೊಂಡು ಈ ಮಹಾವಿದ್ಯಾಲಯ ಜಗತ್ತಿಗೆ ಮತ್ತೊಮ್ಮೆ ದೊರಕಿಸಿ ಕೊಟ್ಟಿದ್ದಾನೆ. ಒಂದು ವೇಳೆ ಈತ ಈ ವಾದವನ್ನು ಮಂಡಿಸದೆ ಇರುತ್ತಿದ್ದರೆ ಇವತ್ತಿಗೂ ಕೂಡ ಕ್ರೈಸ್ತರು ಮೂಢನಂಬಿಕೆಯ ಆಧಾರದಲ್ಲಿ ಬದುಕುತ್ತಿದ್ದರೋ ಏನೋ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ