
ಒಂದು ಪರಿವಾರ ವಾಗಲಿ ಅಥವಾ ಒಂದು ಗೆಳೆತನವಾಗಲಿ ಅದು ಸಾಮರಸ್ಯದಿಂದ ಕೂಡಿದ್ದರೆ ಮಾತ್ರ ಅದಕ್ಕೆ ಮಹತ್ವ ಹಾಗೂ ಅದಕ್ಕೊಂದು ಅರ್ಥವನ್ನು ತರುತ್ತದೆ. ಸಾಮರಸ್ಯವಿಲ್ಲದಿದ್ದರೆ ಯಾರೂ ಕೂಡ ನಯಾಪೈಸೆ ಪ್ರಯೋಜನವಿಲ್ಲ. ಅದರ ಸಂದೇಶವನ್ನು ಕೊಡುವ ಸಲುವಾಗಿ ಈ ದಿವಸವನ್ನು ಮೀಸಲಿಟ್ಟಿದ್ದಾರೆ. ನಮ್ಮ ವೇದದಲ್ಲಿ ಒಂದು ಮಾತಿದೆ, ಎರಡು ಕೈಗಳು ಹಾಗೂ ಕಾಲ್ಗಳು ಒಂದಕ್ಕೊಂದು ಹಿಂದೆ ಮುಂದೆ ಸಾಗುವ ಹಾಗೆ ನಮ್ಮ ಪರಿವಾರಗಳು ಇರಲಿ ಎನ್ನುವ ಪ್ರಾರ್ಥನೆಯಿದೆ.

ಹೇಗೆ ದೇವತೆಗಳು ಪರಸ್ಪರ ಒಬ್ಬರಿಗೊಬ್ಬರು ಪೂರಕವಾಗಿರುತ್ತಾರೋ ಅದೇ ರೀತಿಯಾಗಿ ಸಾಮರಸ್ಯದಿಂದ ನಮ್ಮ ಒಟ್ಟಿಗೆ ಇರುವವರು ನಮ್ಮೊಂದಿಗೆ ಹಾಗೂ ಅವರೊಂದಿಗೆ ನಾವು ಇರುವ ಹಾಗೆ ನಮ್ಮ ಬದುಕು ಸಾಗಲಿ ಎನ್ನುವ ಆಶಯವನ್ನು ಜಗತ್ತಿಗೆ ಕೊಟ್ಟ ಮೊದಲ ಕೀರ್ತಿ ನಮ್ಮ ವೇದಕ್ಕೆ ಸಲ್ಲುತ್ತದೆ. ಆದ್ದರಿಂದ ಸಾಮರಸ್ಯ ದಿನವನ್ನು ಯಾರೇ ಗುರುತಿಸಿರಲಿ ಅದರ ಮಹತ್ವವನ್ನು ಮೊದಲು ಸಾರಿದ್ದು ಸನಾತನ ಧರ್ಮ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ