
1957 ಏಪ್ರಿಲ್ 19 ರಂದು ಮುಕೇಶ್ ಅಂಬಾನಿಯವರು ಗುಜರಾತಿ ಇಂದು ಕುಟುಂಬದಲ್ಲಿ ಇರುವ ಅಂಬಾನಿ ಹಾಗೂ ಕೋಕಿಲಾ ಬೆನ್ ದಂಪತಿಗಳಿಗೆ ಜನಿಸಿದರು. ಇವತ್ತು ಏಷ್ಯಾದ ಪ್ರಥಮ ಶ್ರೀಮಂತ ವ್ಯಕ್ತಿಯ ಸ್ಥಾನದಲ್ಲಿ ಗುರುತಿಸಿಕೊಂಡು ಇರುವವರು ಪ್ರಪಂಚದಲ್ಲಿ ಸಿರಿವಂತರ ಪಟ್ಟಿಯಲ್ಲಿ ಒಂಬತ್ತನೆಯ ಸ್ಥಾನದಲ್ಲಿದ್ದಾರೆ. ತಂದೆ ಕೂಡ ಸ್ವಯಂ ದೊಡ್ಡ ಉದ್ಯಮಿಯಾಗಿದ್ದರು. ಆದ ಮಾತ್ರಕ್ಕೆ ಮಗ ಯಶಸ್ವಿಯಾಗಬೇಕೆಂದು ಏನು ಇಲ್ಲ.

ಆದರೆ ಮುಖೇಶ್ ಅಂಬಾನಿ ತಂದೆಯಿಂದ ಬಂದ ಉದ್ಯಮವನ್ನು ಮುಂದುವರಿಸಿದ್ದು ಮಾತ್ರವಲ್ಲದೆ ಇನ್ನಷ್ಟು ಉದ್ಯಮಗಳಿಗೆ ತೊಡಗಿಸಿಕೊಂಡು ಯಶಸ್ವಿಯಾಗಿ ಬೆಳೆದು ನಿಂತಿದ್ದಾರೆ. ತಂದೆಯ ಸಂಪತ್ತನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಅಷ್ಟು ಸುಲಭವಲ್ಲ ಅದನ್ನು ಸಾಧ್ಯವಾಗಿಸಿಕೊಂಡ ಮುಕೇಶ್ ಅಂಬಾನಿ ನಿಜವಾಗಿಯೂ ಗ್ರೇಟ್. ಇಂದು ಮುಂಬೈಯಲ್ಲಿ ಮೂರು ಮಕ್ಕಳೊಂದಿಗೆ ಹಾಗೂ ಸೊಸೆಯೊಂದಿಗೆ ಮೊಮ್ಮಕ್ಕಳೊಂದಿಗೆ ತುಂಬು ಸಂಸಾರದಿ0ದ ಜೀವನ ನಡೆಸಿಕೊಳ್ಳುತ್ತಿದ್ದಾರೆ. ದೊಡ್ಡ ಮನೆತನ ಅಥವಾ ಶ್ರೀಮಂತಿಕೆ ನಮ್ಮನ್ನು ಮತ್ತಷ್ಟು ಬೆಳೆಸಬೇಕೆಂದೇನಿಲ್ಲ ನಮ್ಮ ಪ್ರಯತ್ನ ಇದ್ದರೆ ಮಾತ್ರ ಅದು ಬೆಳೆಯಬಲ್ಲದು ಎನ್ನುವುದಕ್ಕೆ ಅಂಬಾನಿ ಜಗತ್ತಿಗೆ ಸಾಕ್ಷಿ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ