
ಮಹಾವೀರ ಜಯಂತಿ
ಜೈನ ಧರ್ಮದ 24 ತೀರ್ಥಂಕರರಲ್ಲಿ ಕೊನೆಯವರಾಗಿ ಗುರುತಿಸಿಕೊಂಡವರು ಮಹಾವೀರರು. ಚೈತ್ರ ಮಾಸದ ಶುಕ್ಲ ಪಕ್ಷದ ತ್ರಯೋದಶಿಯಂದು ಮಹಾವೀರನ ಜನನವಾಯಿತು. ಕ್ರಿಸ್ತಪೂರ್ವ 599 ಅಥವಾ 615 ಎನ್ನುವ ವಾದವಿದೆ. ಈ ಬಗ್ಗೆ ನಿಖರವಾದ ದಾಖಲೆಗಳಿಲ್ಲ. ಜೈನ ಧರ್ಮದಲ್ಲಿ ತೀರ್ಥಂಕರರಿಗೆ ವಿಶೇಷವಾದ ಸ್ಥಾನಮಾನವಿದೆ. ಅದರಲ್ಲಿ ಋಷಭನಾಥನಿಂದ ಮೊದಲ್ಗೊಂಡು 22 ತೀರ್ಥಂಕರರು ಪೌರಾಣಿಕ ಪುರುಷರಾಗಿದ್ದಾರೆ. . ಕೊನೆಯ ಇಬ್ಬರು ಪಾರ್ಶ್ವನಾಥ ಹಾಗೂ ಮಹಾವೀರರು ಇತಿಹಾಸ ಪುರುಷರಾಗಿದ್ದಾರೆ. ಭಾರತದಲ್ಲಿ ಋಷಿಮುನಿಗಳಿಗೆ ಮಾತ್ರ ಸೀಮಿತವಾಗಿದ್ದ ಸಸ್ಯಹಾರವನ್ನು ಸಾರ್ವತ್ರಿಕವಾಗಿಸಿದ್ದು ಜೈನರು.

ಆದ್ದರಿಂದ ಸನಾತನದ ಪುರಾಣಕ್ಕೂ ಜೈನರ ತೀರ್ಥಂಕರರಿಗೂ ಬಹಳಷ್ಟು ಸಾಮ್ಯತೆಗಳು ಕಾಣುತ್ತದೆ. ಅದರಲ್ಲೂ ಭಾಗವತದಲ್ಲಿ ಭಗವಂತನ ಅವತಾರವಾದ ಋಷಭ ದೇವನೇ ವೃಷಭನಾಥ ಎನ್ನುವ ಹೆಸರಿನಲ್ಲಿ ಗುರುತಿಸಿಕೊಂಡಿದ್ದಾನೆ. ಆದ್ದರಿಂದ ಸಾವಿರಾರು ವರ್ಷಗಳಿಂದಲೂ ಕೂಡ ಭಾರತದಲ್ಲಿ ಜೈನರು ಹಾಗೂ ಹಿಂದೂಗಳು ಸಮಾನಮಸ್ಕಾರಾಗಿ ಬೆರೆತು ಸಾಗುತ್ತಿದ್ದಾರೆ. ನಮಗೆ ಸಾಕ್ಷಿಯಾಗಿ ಧರ್ಮಸ್ಥಳ ಒಂದೇ ಸಾಕಾಗುತ್ತದೆ. ಜೈನರ ಆಳ್ವಿಕೆಯಲ್ಲಿದ್ದರೂ ಕೂಡ ಹಿಂದು ಧರ್ಮದ ರೀತಿಯಲ್ಲಿ ನಡೆಯುವ ಪೂಜೆ ಪುರಸ್ಕಾರಗಳಿಗೆ ಧರ್ಮಸ್ಥಳಕ್ಕೆ ಸಾಟಿಯಾಗಬಲ್ಲ ಕ್ಷೇತ್ರವಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ