
ಕಾಮದಾ ಏಕಾದಶಿ
ಹೆಸರೇ ಹೇಳುವ ಹಾಗೆ ಬಯಸಿದ್ದೆಲ್ಲವನ್ನು ಕೊಡುವ ಏಕಾದಶಿ. ಏಕಾದಶಿಯ ಉಪವಾಸವೇ ಪ್ರದಾನವಾಗಿ ಮಹಾವಿಷ್ಣುವಿನ ಪ್ರೀತಿಗಾಗಿ ಹಾಗೂ ನಮ್ಮ ಆರೋಗ್ಯಕ್ಕಾಗಿಯು ಇರುವುದು. ಆದ್ದರಿಂದ ದೇವರ ಅನುಗ್ರಹ ಹಾಗೂ ಸುದೃಢವಾದ ಆರೋಗ್ಯಕ್ಕಿಂತ ದೊಡ್ಡ ಅಪೇಕ್ಷೆ ಯಾವುದೂ ಇದ್ದರೂ ಅದು ದೊಡ್ಡದಲ್ಲ. ಆದ್ದರಿಂದ ಭಗವಂತನ ಪ್ರೀತಿಯರ್ಥವಾಗಿ ನಡೆಸುವ ಉಪವಾಸ ದಿಂದ ದೊರಕುವ ಸಂಪತ್ತು ಅದು ಶಾಶ್ವತ. ಏಕೆಂದರೆ ಅದು ಭಗವಂತ ನಮ್ಮ ಯೋಗ್ಯತೆಗೆ ಅನುಗುಣವಾಗಿ ಕೊಟ್ಟದ್ದು. ಆದ್ದರಿಂದ ಕಾಮದಾ ಎಂದರೆ ಬೇಕಾದದ್ದನ್ನು ಕೊಡುತ್ತದೆ ಎಂದು.

ನಮಗೆ ಬೇಕಾದದ್ದನ್ನು ಎನ್ನುವುದಕ್ಕಿಂತ ದೇವರಿಗೆ ನಮಗೆ ಕೊಡಬೇಕಾದದ್ದನ್ನು ಕೊಡುವುದಕ್ಕಾಗಿ ಎಂದುಕೊಳ್ಳುವುದು ಸೂಕ್ತ. ಉಪವಾಸ ಎಂದರೆ ಹತ್ತಿರದಲ್ಲಿ ಇರುವುದು ಎಂದರ್ಥ. ಭಗವಂತನ ಚಿಂತನೆಯಲ್ಲಿ ನಮ್ಮನ್ನು ವಿನಿಯೋಗಿಸಿಕೊಳ್ಳುವುದು ಇದರ ಪ್ರಮುಖವಾದ ಉದ್ದೇಶ. ಅದಕ್ಕೆ ಸಹಾಯವಾಗುತ್ತದೆ ಎನ್ನುವ ದೃಷ್ಟಿಯಿಂದ ತಿನ್ನುವುದನ್ನು ಅಥವಾ ಇನ್ನಿತರ ಆಸೆಗಳನ್ನು ಬದುಗಿರಿಸುವ ಉದ್ದೇಶ. ಈ ಮೂಲಕ ಈ ದಿನ ಸಾರ್ಥಕವಾಗಲಿ ಹಾಗೂ ಭಗವಂತನ ಅನುಗ್ರಹಕ್ಕೆ ಪಾತ್ರವಾಗಲಿ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ