
“ಹುಟ್ಟಲಿರುವ ಮಗುವಿನ ದಿನ” ಬಹಳ ಆಶ್ಚರ್ಯವಾಗಬಹುದು ಇದಕ್ಕೂ ಒಂದು ದಿನವಿದೆಯೇ ಎಂದು ಆದರೆ ಒಂದು ವಿಚಾರಕ್ಕಾಗಿ ಒಂದು ದಿನವನ್ನು ಮೀಸಲಿ ಇಡುವುದು ಎಂದರೆ ಆ ದಿನ ಆ ವಿಚಾರವನ್ನು ತಿಳಿದು ತಿಳಿಸಬೇಕು ಎನ್ನುವುದು ಆ ದಿನದ ಹಿಂದಿರುವ ಉದ್ದೇಶ. ಮನುಷ್ಯ ಹುಟ್ಟುತ್ತಿದ್ದಾನೆ ಎನ್ನುವುದೇ ಒಂದು ಆಶ್ಚರ್ಯದ ಸಂಗತಿ. ತಾಯಿಯ ಹೊಟ್ಟೆಯಲ್ಲಿರುವ ಮಗು ಅದು ಮಾತು ಕೇಳುತ್ತದೆ ಹಾಗೂ ಮನಸ್ಸಿನಲ್ಲಿ ಯೋಚಿಸುತ್ತದೆ ಎನ್ನುವುದನ್ನು ಭಾರತೀಯರಂತೂ ಸಾವಿರಾರು ವರ್ಷದ ಹಿಂದೆಯೇ ಕಂಡುಕೊಂಡಿದ್ದಾರೆ.

ಹೊಟ್ಟೆಯ ಒಳಗೆ ನಮ್ಮಲ್ಲಿ ಭಾಗವತವನ್ನು ಕೇಳಿದವರು ಇದ್ದಾರೆ. ಬಿಡಿ ವಿದ್ಯೆಯನ್ನು ಕಲಿತವರಿದ್ದಾರೆ ಅದನ್ನು ಪ್ರಯೋಗಕ್ಕೆ ತಂದವರಿದ್ದಾರೆ ಹೀಗೆ ಹೊಟ್ಟೆಯಲ್ಲಿರುವ ಸಮಯ ಇಷ್ಟೆಲ್ಲ ಮಹತ್ವಪೂರ್ಣವಾದದ್ದು. ಅದಕ್ಕಾಗಿ ತಾಯಿಯಾದವಳು ಒಳ್ಳೆಯ ಆಹಾರ ಒಳ್ಳೆಯ ಚಿಂತನೆಯಿಂದ ಕೂಡಿದ್ದರೆ ಮಾತ್ರ ಆ ಮಗು ಆ ಚಿಂತನೆಯಿಂದ ಹುಟ್ಟಿ ಬರುತ್ತದೆ. ಆ ನಿಟ್ಟಿನಲ್ಲಿ ಇಂತಹ ವಿಚಾರಗಳು ತಿಳಿಯಲಿ ಎಂದು ಹುಟ್ಟಲಿರುವ ಮಗುವಿಗಾಗಿ ಈ ದಿನವನ್ನು ಮೀಸಲಿಟ್ಟಿದ್ದಾರೆ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ