
ಅಂತರಾಷ್ಟ್ರೀಯ ಕುಟುಂಬಗಳ ದಿನ
1993ರಲ್ಲಿ ವಿಶ್ವಸಂಸ್ಥೆಯು ಕುಟುಂಬಗಳ ಮಹತ್ವವನ್ನು ತಿಳಿಸಬೇಕು ಹಾಗೂ ಜನರಿಗೆ ಈ ಬಗ್ಗೆ ಜಾಗೃತಿಯನ್ನು ಕೊಡಬೇಕು ಎನ್ನುವ ಉದ್ದೇಶದಿಂದ ಈ ದಿನವನ್ನು ಮೀಸಲಿಟ್ಟಿತು. ಅಂದಿನಿಂದ ಇಂದಿನ ತನಕ ಪ್ರತಿ ವರ್ಷ ಕುಟುಂಬಗಳ ಉದ್ದೇಶದಲ್ಲಿ ಒಂದು ಸಂದೇಶವನ್ನು ಜಗತ್ತಿಗೆ ಕೊಡುತ್ತಿದೆ. ಇಡೀ ಪ್ರಪಂಚದಲ್ಲಿ ಕುಟುಂಬಗಳ ವಿಚಾರದಲ್ಲಿ ಭಾರತದಷ್ಟು ದೃಢವಾಗಿ ಹಾಗೂ ಒಂದು ಚೌಕಟ್ಟಿನ ಒಳಗೆ ಕಂಡುಬರುವಂತಹ ವೈಶಿಷ್ಟ್ಯತೆ ಬೇರೆ ಯಾವ ದೇಶದಲ್ಲೂ ಕಾಣಲು ಸಾಧ್ಯವಿಲ್ಲ. ಭಾರತದಲ್ಲಿ ನಿನ್ನೆ ಮೊನ್ನೆಯ ತನಕವೂ ಕೂಡ ಅವಿಭಕ್ತ ಕುಟುಂಬ ಜಾರಿಯಲ್ಲಿತ್ತು. ಇವತ್ತಿಗೂ ಉತ್ತರ ಪ್ರದೇಶದಲ್ಲಿ ಹಾಗೂ ಮಹಾರಾಷ್ಟ್ರದಲ್ಲಿ ಗುಜರಾತಿನಲ್ಲಿ ಇವತ್ತಿಗೂ ಅವಿಭಕ್ತ ಕುಟುಂಬಗಳು ಕಾಣಸಿಗುತ್ತದೆ. ಒಂದೇ ಮನೆಯಲ್ಲಿ ಕನಿಷ್ಠ 25 ಮಂದಿ ವಾಸವಿರುತ್ತಾರೆ.

ನಮ್ಮಲ್ಲಿಯೂ ಅಲ್ಲೊಂದು ಇಲ್ಲೊಂದು ಐದಾರು ಮಂದಿ ಇರುವಂತಹ ಮನೆಗಳು ಬೇಕಾದಷ್ಟು ಇವೆ. ಅಷ್ಟೇ ಅಲ್ಲದೆ ಸಂಬಂಧಗಳ ಬೆಲೆ ಹಾಗೂ ಮಹತ್ವ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಚಾಲ್ತಿಯಲ್ಲಿತ್ತು. ಇವತ್ತಿಗೂ ಸುಮಾರು 20ರಿಂದ 30 ಸಂಬಂಧಗಳ ಹೆಸರುಗಳು ಸಿಗುತ್ತದೆ. ಆದರೆ ಈಗ ಪಾಶ್ಚಾತ್ಯ ಸಂಸ್ಕೃತಿಗೆ ಬಲಿಯಾಗಿ ಕೇವಲ ಎರಡು ಮೂರು ಸಂಬಂಧಗಳಿಗೆ ಸೀಮಿತವಾಗಿ ಬದುಕುತ್ತಿದ್ದೇವೆ. ಹಾಗಾಗಬಾರದು ಸಂಬಂಧಗಳನ್ನು ಉಳಿಸುವಲ್ಲಿ ನಾವು ಮಹತ್ವವನ್ನು ಕಂಡುಕೊಳ್ಳಬೇಕು. ಕುಟುಂಬಗಳು ಇದ್ದಷ್ಟು ಭದ್ರತೆ ಹೆಚ್ಚು ಇರುತ್ತದೆ ಭದ್ರತೆ ಕಡಿಮೆಯಾಗುತ್ತದೆ
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ