
ಚೈತ್ರ ಮಾಸದ ಚಿತ್ರ ಪೂರ್ಣಿಮೆಯಂದು ಹನುಮನ ದಿವ್ಯ ಅವತಾರ ಅಂಜನೆಯ ಗರ್ಭಾಂಬುಧಿಯಲ್ಲಿ ಆಯಿತು. ರಾಮಾಯಣದಲ್ಲಿ ಶ್ರೀರಾಮ ಸೇವಾಧುರಂಧರನಾಗಿ ಗುರುತಿಸಿಕೊಂಡವರಲ್ಲಿ ಅಗ್ರಗಣ್ಯನಿದ್ದಾನೆ. ಸ್ವಾಮಿ ನಿಷ್ಠೆಗೆ ಹನುಮನಿಗೆ ಸಇಲ್ರಿಯಾದ ಉದಾಹರಣೆ ಬೇರೆ ಇಲ್ಲ. ಎಲ್ಲಿ ಹೇಗೆ ವ್ಯವಹರಿಸಬೇಕು ಎನ್ನುವ ಬುದ್ಧಿಶಕ್ತಿ, ಚೆನ್ನಾಗಿ ಅಂಗಸೌಷ್ಠವಗಳಿಂದ ಕೂಡಿದ ದೇಹಬಲ, ಹಿಡಿದ ಕಾರ್ಯದಲ್ಲಿ ಪಡೆದ ಯಶಸ್ಸು, ಕೆಚ್ಚೆದೆಯ ಧೈರ್ಯ, ಯಾವುದಕ್ಕೂ ಕೆಂಗೆಡದ ನಿರ್ಭೀತ ಸ್ಥಿತಿ, ಸುದೃಢವಾದ ಆರೋಗ್ಯ, ಉದಾಸೀನವಿಲ್ಲದ ಚುರುಕುತನ, ಸ್ಫುಟವಾದ ಮಾತುಗಳು ಈ ಎಂಟುಗಳು ಹನುಮಂತನಲ್ಲಿ ವಿಫಲವಾಗಿ ಇದ್ದವು.

ಸಾಗರೋಲಂಘನೆಯನ್ನು ಮಾಡಿ ಸೀತಾನ್ವೇಷಣೆ ಹಾಗೂ ಲಂಕಾದಹನದ ಪ್ರಕರಣದಲ್ಲಿ ಎಲ್ಲಾ ಗುಣವನ್ನು ಕಾಣುತ್ತೇವೆ. ಹನುಮಂತನನ್ನು ಆರಾಧಿಸುವುದರಿಂದ ನಮಗೂ ಕೂಡ ಈ ಗುಣಗಳು ಖಂಡಿತ ಸಿದ್ಧಿಸುತ್ತವೆ. ಆದ್ದರಿಂದ ಹನುಮನ ಆರಾಧನೆಯನ್ನು ಮಾಡಿ ಈ ಗುಣಗಳನ್ನು ಪಡೆದು ಮತ್ತಷ್ಟು ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳೋಣ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ