
ದ್ವಾದಶಿ
ಪ್ರತಿಯೊಬ್ಬ ಏಕಾದಶಿಯನ್ನು ಆಚರಿಸುವವನಿಗೂ ಏಕಾದಶಿಗಿಂತಲೂ ಮಹತ್ವಪೂರ್ಣವಾಗಿ ಆಚರಿಸ ಪಡಬೇಕಾದದ್ದು ದ್ವಾದಶಿಯ ಪಾರಣವನ್ನು. ಅರ್ಥಾತ್ ದ್ವಾದಶಿಯ ಬೆಳಗ್ಗೆ ಭಗವಂತನ ಪೂಜಾರಿಗಳನ್ನು ಮುಗಿಸಿ ತೀರ್ಥ ಸ್ವೀಕಾರದ ನಂತರ ದೇವರಿಗೆ ನಿವೇದಿಸಲ್ಪಟ್ಟ ಭಗವತ್ ಪ್ರಸಾದವನ್ನು ಊಟ ಮಾಡುವ ಮೂಲಕ ಏಕಾದಶಿಯ ವ್ರತದ ಆಚರಣೆಯನ್ನು ಕೃಷ್ಣಾರ್ಪಣ ಗೊಳಿಸಬೇಕು.

ಅನ್ನದಾನದ ಮೂಲಕವೇ ಊಟದ ಮೂಲಕವೇ ನಮ್ಮ ಆಚರಣೆಗಳು ಪರಿಸರಪ್ತಿ ಗೊಳ್ಳುವುದು. ಆದ್ದರಿಂದ ಏಕಾದಶಿಯ ಉಪವಾಸ ವ್ರತ ಮುಕ್ತಾಯಗೊಳ್ಳುವುದು ದ್ವಾದಶಃ ಊಟದ ನಂತರ. ಅಂಬರೀಶ ತನ್ನ ಜೀವಮಾನದ ಸಾರ್ಥಕತೆಯನ್ನು ಈ ವ್ರತದ ಮೂಲಕವಾಗಿ ಪಡೆದುಕೊಂಡ ಇತಿಹಾಸವಿದೆ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ