
ಟಿಪ್ಪುವಿನ ಮೃತ್ಯು
ಮೈಸೂರಿನ ಇತಿಹಾಸದಲ್ಲಿ ಕರಾಳ ಅಧ್ಯಾಯವನ್ನು ತೋರಿಸಿದವ ಹೈದರಾಲಿಯ ಮಗ ಟಿಪ್ಪು. 1750 ನವಂಬರ್ 20 ರಂದು ಈಗಿನ ಬೆಂಗಳೂರಿನಲ್ಲಿ ಹುಟ್ಟಿದ್ದು. ತಂದೆ ಹೈದರಾಲಿ ಮೈಸೂರು ಒಡೆಯರ ಅನಂತರ ಮೋಸದಿಂದ ಅಧಿಕಾರವನ್ನು ಕೈವಶ ಹೈದರಾಲಿಯ ನಂತರ ತಂದೆಯ ಅಧಿಕಾರ ಟಿಪ್ಪುವಿನ ಕೈವಶವಾಯಿತು. ಈತನ ಅಧಿಕಾರ ಅವಧಿಯಲ್ಲಿ ಹಲವಾರು ಬದಲಾವಣೆಗಳನ್ನು ತಂದರೂ ಕೂಡ ಈತ ಕಟ್ಟ ಇಸ್ಲಾಂ ಅನುಸರಿಸುತ್ತಿದ್ದರಿಂದ ಹಿಂದೂಗಳನ್ನು ಒಳಗಿಂದೊಳಗೆ ಬಹಳ ದ್ವೇಷಿಸುತ್ತಿದ್ದ. ಅತ್ಯಂತ ಕಟ್ಟಾ ಮತೀಯನಾಗಿದ್ದ ಟಿಪ್ಪು ತನ್ನ ಆಡಳಿತ ಕಾಲದಲ್ಲಿ ಹಲವು ಊರುಗಳ ಹೆಸರುಗಳನ್ನು ಬದಲಾಯಿಸಿದ. ಮಂಗಳೂರು ಜಲಲಾಬಾದ್ ಆಯಿತು. ಮೈಸೂರು – ನಝರಾಬಾದ್, ಕಣ್ಣಾನೂರು – ಕುಸನಬಾದ್, ಗುಟ್ಟಿ – ಫೈಜ್ ಹಿಸ್ಸಾರ್, ಧಾರವಾಡ – ಖುರ್ಷಿದ್ ಸವಾಡ್, ದಿಂಡಿಗಲ್ – ಕಲಿಖಾಬಾದ್, ರತ್ನಗಿರಿ – ಮುಸ್ತಫಾಬಾದ್, ಕಲ್ಲಿಕೋಟೆ – ಇಸ್ಲಮಾಬಾದ್.. ಹೀಗೆ ಮೈಸೂರಿನ ಸುತ್ತಮುತ್ತಲಿನ ಜಾಗಗಳಿಗೆಲ್ಲ ಟಿಪ್ಪು ಮುಸ್ಲಿಮ್ ಹೆಸರುಗಳನ್ನು ಇಡುತ್ತಾ ಹೋದ.
ಟಿಪ್ಪು ಊರುಗಳ ಹೆಸರುಗಳನ್ನು ಬದಲಿಸಿದ್ದು ಮಾತ್ರವಲ್ಲ; ದೂರವನ್ನು ಅಳೆಯುವ ಅಳತೆ ಮತ್ತು ಮಾನದಲ್ಲಿಯೂ ಇಸ್ಲಾಂ ಮತವನ್ನು ತುರುಕಿದ. ಖುರಾನಿನ ಒಂದು ಸಾಲು (ಕಲ್ಮಾ) ಇಪ್ಪತ್ತನಾಲ್ಕು ಅಕ್ಷರಗಳನ್ನು ಹೊಂದಿದೆಯೆಂಬ ಕಾರಣಕ್ಕೆ 24 ಅಂಗುಲಗಳ ಉದ್ದವನ್ನು ಮೂಲಮಾನವಾಗಿ ಇಟ್ಟುಕೊಂಡ. ಉಳಿದೆಲ್ಲ ಅಳತೆಗಳೂ ಇದಕ್ಕೆ ತಕ್ಕಂತೆ ಬದಲಾದವು.

ಪ್ರವಾದಿ ಮುಹಮ್ಮದರು ಹುಟ್ಟಿದ ವರ್ಷದಿಂದ ಆರಂಭಿಸಿ ಹೊಸ ಶಕೆಯೊಂದನ್ನು ಆರಂಭಿಸಿ, ಹೊಸ ಬಗೆಯ ಪಂಚಾಂಗವನ್ನು ಟಿಪ್ಪು ಜಾರಿಗೆ ತಂದ. ಸೌರಮಾನ ಪದ್ಧತಿಯನ್ನು ಕೈಬಿಟ್ಟು ಚಾಂದ್ರಮಾನ ಪದ್ಧತಿ ಅನುಸರಿಸಲು ಆದೇಶ ಹೊರಡಿಸಲಾಯಿತು. ಟಿಪ್ಪು ಪ್ರಾರಂಭಿಸಿದ ವರ್ಷದಲ್ಲಿ 354 ದಿನಗಳಿದ್ದವು. ವರ್ಷಗಳಿಗೆ ಅಹಂದ್, ಅಬ್, ಝಾ, ಬಾಬ್ ಮುಂತಾದ ಇಸ್ಲಾಮಿಕ್ ಹೆಸರುಗಳನ್ನು ಕೊಡಲಾಯಿತು. ಆದರೆ ತನ್ನ ಅಧಿಕಾರ ಹಾಗೂ ಅರಮನೆಯನ್ನು ಕಾಪಾಡಿಕೊಳ್ಳಲು ಆಂಗ್ಲರೊಂದಿಗೆ ಬಹಳಷ್ಟು ಹೋರಾಟವನ್ನು ಮಾಡಿ ಆಂಗ್ಲರಪಾಲಿಗೆ ಸಿಂಹ ಸ್ವಪ್ನದಂತಿದ್ದ. ಕೊನೆಯ ಕಾಲದಲ್ಲಿ ಆಂಗ್ಲ -ಮೈಸೂರು ಯುದ್ಧದ ಸಂದರ್ಭದಲ್ಲಿ 1799 ಮೇ 4ರಂದು ಈತ ಮರಣವನ್ನಪ್ಪುತ್ತಾನೆ. ಈತನ ಮರಣದ ಬಗ್ಗೆಯೂ ಕೂಡ ನಿಖರವಾದ ಮಾಹಿತಿಗಳಿಲ್ಲ. ಯಾರು ಕೊಂದರು ಎನ್ನುವುದು ನಿಗೂಢವಾಗಿಯೇ ಉಳಿಯಿತು..
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ