
ನಮ್ಮ ಸಂಪ್ರದಾಯದಲ್ಲಿ ವರ್ಷವನ್ನು ಹಲವಾರು ವಿಧದಿಂದ ಗುರುತಿಸುವ ಬಗೆಗಳಿವೆ. ಕೇವಲ ಇಸವಿಯಿಂದ ಮಾತ್ರ ಗುರುತಿಸುವಷ್ಟು ದಾರಿದ್ರ್ಯ ನಮ್ಮದಲ್ಲ. ನಕ್ಷತ್ರದಿಂದ ಹಾಗೆಯೇ ಚಂದ್ರನ ಮೂಲಕ ನಡೆಯುವ ಚೈತ್ರಾದಿ ಮಾಸಗಳಿಂದ ಹಾಗೂ ಸೂರ್ಯನ ನಡೆಯಿಂದ ತಿಳಿಯುವ ಮೇಷಾದಿ ರಾಶಿಗಳಿಂದ ಹಾಗೂ ಗುರುವಿನ ಸಂಚಾರದ ಕ್ರಮದಿಂದ ಹೀಗೆ ಸುಮಾರು ಬಗೆಗಳಿಂದ ವರ್ಷವನ್ನು ಗುರುತಿಸಬಹುದು.

ಅದರಲ್ಲಿ ಇವತ್ತು ಚಂದ್ರ ಚೈತ್ರ ತಿಂಗಳ ಮೊದಲ ದಿನದಲ್ಲಿ ಗುರುತಿಸಲ್ಪಡುತ್ತಿದ್ದಾನೆ. ಆತನ ಸಂಚಾರ ಪುನಹ ಪ್ರಾರಂಭವಾಗಿದೆ. ಆದ್ದರಿಂದ ಇದೊಂದು ಹೊಸ ವರ್ಷ. ಹೊಸ ಯುಗ. ಹೊಸ ಚಿಂತನೆಗೆ ಅವಕಾಶ. ಹೊಸ ಬದುಕು ಕಟ್ಟಿಕೊಳ್ಳಬಹುದು. ಯುಗಾದಿ ಇದಕ್ಕೆಲ್ಲ ನಾಂದಿಯಾಗಲಿ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ