
ಮೇಷ ಸಂಕ್ರಾಂತಿ
ಸೂರ್ಯ ತನ್ನ ಪಥ ಬದಲಿಸುವ ಸಮಯ. ಇವತ್ತು ಈತ ಮೀನ ರಾಶಿಯಿಂದ ಮೇಷ ರಾಶಿಗೆ ಬರುತ್ತಾನೆ. ಸೌರಮಾನದ ಪ್ರಕಾರ ಅರ್ಥಾತ್ ಸೂರ್ಯನ ಸಂಚಾರದ ಪ್ರಕಾರ ಇವತ್ತಿಗೆ 12 ರಾಶಿಗಳನ್ನು ಕ್ರಮಿಸಿ ಬಂದ ಕಾರಣದಿಂದ ಇಂದಿಗೆ ಒಂದು ವರ್ಷ ಕಳೆಯಿತು. ಸೂರ್ಯನಿಗೆ ಮೇಷ ರಾಶಿ ಅತ್ಯಂತ ನೆಚ್ಚಿನ ರಾಶಿಯಾಗಿದೆ. ಇದರಲ್ಲೂ ಮೊದಲ 10 ಭಾಗದಲ್ಲಿ ಆತ ಪರಮೋಚ್ಚನಾಗಿದ್ದಾನೆ. ಸೂರ್ಯ ಮೇಷ ರಾಶಿಯಲ್ಲಿರುವಾಗ ಹುಟ್ಟಿದವ ಸದಾ ಸಂಚಾರ ಶೀಲನಾಗಿರುತ್ತಾನೆ ಹಾಗೂ ಚುರುಕು ಮತಿಯುಳ್ಳವನಾಗಿರುತ್ತಾನೆ.

ಅಷ್ಟೇ ಅಲ್ಲದೆ ಯೋಗ್ಯ ಸೇನಾನಿಯಾಗುವ ಸಾಧ್ಯತೆ ಕೂಡ ಇದೆ. ರವಿ ಆತ್ಮಕ್ಕೆ ಕಾರಕನಾದರೆ ಮೇಷ ರಾಶಿಯ ಕುಜ ದೇಹಕ್ಕೆ ಕಾರಕ ಇವರ ಅನುಕೂಲ ಪ್ರತಿಕೂಲಕ್ಕೆ ಸರಿಯಾಗಿ ಆತ ಇಚ್ಛಾಶಕ್ತಿಯ ಒಟ್ಟಿಗೆ ಕ್ರಿಯಾಶಕ್ತಿಯನ್ನು ರೂಪಿಸಿಕೊಳ್ಳುವ ಸಾಧ್ಯತೆ ಇದೆ. ಈ ರಾಶಿಯ ಸ್ವರೂಪ ಆಡಿನಂತೆ. ಅದಕ್ಕೆ ಇದಕ್ಕೆ ಮೇಷ ಎಂದು ಹೆಸರು. ಸಾತ್ವಿಕತೆ ಹಾಗೂ ಇಂಥ ಪರಿಸ್ಥಿತಿಯಲ್ಲೂ ಒಡ್ಡಿಕೊಳ್ಳುವ ಗುಣ ಈ ಪ್ರಾಣಿಗಿದೆ. ಇದರಲ್ಲಿ ಕೆಲವು ಆ ರಾಶಿಯವರಿಗೆ ಬರುವ ಸಾಧ್ಯತೆ ಕೂಡ ಇರುತ್ತದೆ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ