
ಬೆಂಗಳೂರು: ನಿತ್ಯ ಜೀವನದಲ್ಲಿ ನಮ್ಮ ಮಲಗುವ ದಿಕ್ಕು ಕೂಡ ನಮ್ಮ ಆರೋಗ್ಯ, ಮನೋಸ್ಥಿತಿ, ಯಶಸ್ಸು, ಮತ್ತು ಜೀವನ ಶೈಲಿಯ ಮೇಲೆ ಪರಿಣಾಮ ಬೀರುತ್ತದೆ ಎಂಬುದು ವಾಸ್ತು ಶಾಸ್ತ್ರದ ನಿಲುವು. ಸರಿಯಾದ ದಿಕ್ಕಿಗೆ ತಲೆಯಿಟ್ಟು ಮಲಗುವುದು ನಿದ್ರೆಯ ಗುಣಮಟ್ಟ ಹೆಚ್ಚಿಸುವಷ್ಟೇ ಅಲ್ಲದೆ, ಯಶಸ್ಸು ಮತ್ತು ಸಮೃದ್ಧಿಯ ದಿಕ್ಕಿಗೂ ದಾರಿ ನೀಡುತ್ತದೆ ಎಂದು ವಾಸ್ತು ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
ವಾಸ್ತು ಪ್ರಕಾರ:
ದಕ್ಷಿಣ ದಿಕ್ಕು: ವಯಸ್ಕರು, ಉದ್ಯಮಿಗಳು, ಹಾಗೂ ಉದ್ಯೋಗಸ್ಥರಿಗೆ ಅತ್ಯುತ್ತಮ. ಯಶಸ್ಸು, ನೆಮ್ಮದಿ, ಆರೋಗ್ಯ ಲಭ್ಯ.
ಪೂರ್ವ ದಿಕ್ಕು: ಮಕ್ಕಳಿಗೆ, ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಇಡೀ ಪ್ಲಸ್ ಪಾಯಿಂಟ್. ಗುರುತಿನ ಗ್ಲೋ ಬರುತ್ತದೆ.
ಪಶ್ಚಿಮ ದಿಕ್ಕು: ತಟಸ್ಥವಾದ ದಿಕ್ಕು. ಅತಿಥಿಗಳಿಗೆ ಸೂಕ್ತ. ಕೆಲವೊಮ್ಮೆ ಅವಕಾಶಗಳ ಕಿಡಿ ಹಚ್ಚಬಹುದು.
ಉತ್ತರ ದಿಕ್ಕು: ಬಹುಮಟ್ಟಿಗೆ ವರ್ಜಿತ. ಹೃದಯ, ಮೆದುಳಿಗೆ ಒತ್ತಡ, ನಿದ್ರಾ ಸಮಸ್ಯೆ, ಒತ್ತಡದ ಜೀವನಕ್ಕೆ ಕಾರಣ.
ವಾಸ್ತು ಶಾಸ್ತ್ರದ ಪ್ರಕಾರ, ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಿದರೆ ದೇಹದ ಅಯಸ್ಕಾಂತೀಯ ಕ್ಷೇತ್ರಗಳು ಗೊಂದಲಕ್ಕೆ ಒಳಗಾಗುತ್ತವೆ. ಇದರಿಂದ ರಕ್ತಸಂಚಾರ ದುರ್ಬಲವಾಗುತ್ತಿದ್ದು, ಮಾನಸಿಕ ಅಸ್ವಸ್ಥತೆ, ನಿದ್ರಾಹೀನತೆ ಮತ್ತು ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.