
ಮಧುಮೇಹ ಇರುವವರು ಆರೋಗ್ಯಕರ ಜೀವನಶೈಲಿಗೆ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ವಿಶೇಷವಾಗಿ, ಬೆಳಗಿನ ಉಪಹಾರ ಅವರ ದಿನವಿಡೀ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸರಿಯಾದ ಆಹಾರ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿ ಇಡಲು ಸಾಧ್ಯ.
ಮಧುಮೇಹಿಗಳಿಗೆ ಪ್ರೋಟೀನ್ ಹಾಗೂ ಸಮತೋಲಿತ ಆಹಾರ ತುಂಬಾ ಮುಖ್ಯ. ಬೆಳಿಗ್ಗೆ ಹೆಚ್ಚು ಫೈಬರ್ ಇರುವ ಆಹಾರ ಸೇವಿಸಿದರೆ, ಇಡೀ ದಿನ ಶಕ್ತಿಯುತವಾಗಿರಲು ಸಹಾಯ ಮಾಡುತ್ತದೆ ಮತ್ತು ಶುಗರ್ ಲೆವೆಲ್ ನಿಯಂತ್ರಣದಲ್ಲಿರುತ್ತದೆ.
ಆಯುರ್ವೇದ ಸಲಹೆ:
ಬೆಳಿಗ್ಗೆ ಒಂದು ಚಮಚ ತುಪ್ಪದೊಂದಿಗೆ ಅರಿಶಿನ ಪುಡಿ ಸೇವಿಸುವುದು ಮಧುಮೇಹಿಗಳಿಗೆ ಅತ್ಯುತ್ತಮ ಆಯ್ಕೆ. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ದಿನವಿಡೀ ಸಮತೋಲನದಲ್ಲಿ ಇರಿಸಲು ಸಹಾಯ ಮಾಡುತ್ತದೆ. ತುಪ್ಪ ದೇಹಕ್ಕೆ ಅವಶ್ಯಕವಾದ ಕೊಬ್ಬು ಒದಗಿಸಿ ಶುಗರ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗುತ್ತದೆ, ಜೊತೆಗೆ ಅರಿಶಿನವು ಶಕ್ತಿಶಾಲಿ ಔಷಧೀಯ ಗುಣ ಹೊಂದಿರುವುದರಿಂದ ಆರೋಗ್ಯಕ್ಕೆ ಹೆಚ್ಚು ಲಾಭಕರವಾಗಿದೆ.