
ಬೇಸಿಗೆಯಲ್ಲಿ ತ್ವಚೆ ಒಣಗುವುದು, ಕಳೆಗುಂದುವುದು, ಮೊಡವೆ ಮತ್ತು ಬಿರುಕು ಬಿಡುವುದು ಸಾಮಾನ್ಯ. ಇದರಿಂದ ತಪ್ಪಿಸಿಕೊಳ್ಳಲು ನಿರ್ದಿಷ್ಟ ಸಲಹೆಗಳನ್ನು ಪಾಲಿಸಬಹುದು.
*ಹೈಡ್ರೇಶನ್: ದಿನಕ್ಕೆ 3-4 ಲೀಟರ್ ನೀರು ಕುಡಿಯುವುದು ಅಗತ್ಯ. ಇದರಿಂದ ದೇಹವೂ ಹೈಡ್ರೇಟ್ ಆಗುತ್ತದೆ, ತ್ವಚೆಯೂ ಆರೋಗ್ಯಕರವಾಗಿರುತ್ತದೆ.
*ನೀರಿನಾಂಶವಿರುವ ಆಹಾರ: ಸೌತೆಕಾಯಿ, ಕಲ್ಲಂಗಡಿ, ಕಿತ್ತಳೆ, ಸ್ಟ್ರಾಬೆರಿ ಇತ್ಯಾದಿ ನೀರಿನಾಂಶಳ್ಳ ಆಹಾರ ಸೇವಿಸುವುದು ಉತ್ತಮ.
*ಸ್ವಚ್ಛತೆ: ತ್ವಚೆ ಹೆಚ್ಚಿನ ಎಣ್ಣೆಯನ್ನು ಉತ್ಪಾದಿಸುವ ಕಾರಣದಿಂದ ದಿನಕ್ಕೆ ಮೂರು ಬಾರಿ ತಣ್ಣೀರಿನಿಂದ ಮುಖ ತೊಳೆಯುವುದು ಒಳಿತು.
*ಸನ್‌ಸ್ಟೀನ್ ಬಳಕೆ: ಯುವಿ ವಿಕಿರಣದಿಂದ ತ್ವಚೆಯನ್ನು ರಕ್ಷಿಸಲು ಸನ್‌ಸ್ಟೀನ್ ಬಳಸಿ.
*ನೈಸರ್ಗಿಕ ಫೇಸ್ ಪ್ಯಾಕ್: ಜೇನುತುಪ್ಪ-ಮೊಸರು, ಸೌತೆಕಾಯಿ ಫೇಸ್ ಪ್ಯಾಕ್ ಅಥವಾ ಟೊಮೆಟೊ ಪ್ಯಾಕ್ ಬಳಸುವುದು ಪರಿಣಾಮಕಾರಿ.
*ಮಾಯಿಶ್ಚರೈಸರ್: ತ್ವಚೆಗೆ ತೇವಾಂಶ ನೀಡಲು ಮಾಯಿಶ್ಚರೈಸರ್ ಬಳಸಿ.
ಬೇಸಿಗೆಯಲ್ಲಿ ತ್ವಚೆಯ ಆರೋಗ್ಯ ಕಾಪಾಡಲು ಈ ಕ್ರಮಗಳನ್ನು ಅನುಸರಿಸುವುದು ಮುಖ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.