
ಮಲೇಷ್ಯಾ: ಆಗ್ನೇಯ ಏಷ್ಯಾದ ಉಷ್ಣವಲಯದಲ್ಲಿ ಬೆಳೆದರೂ, ಇತ್ತೀಚೆಗೆ ವಿಶ್ವದಾದ್ಯಂತ ಜನಪ್ರಿಯತೆ ಪಡೆಯುತ್ತಿರುವ ರಂಬುಟಾನ್ ಹಣ್ಣು ಆಹಾರ ಮತ್ತು ಆರೋಗ್ಯದಲ್ಲಿ ಮಹತ್ವಪೂರ್ಣ ಸ್ಥಾನ ಪಡೆಯುತ್ತಿದೆ. ಮಲೇಷ್ಯಾ, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾ ದೇಶಗಳು ಜಗತ್ತಿಗೆ ಬೇಕಾಗುವ ಶೇಕಡಾ 95 ಕ್ಕೂ ಹೆಚ್ಚು ರಂಬುಟಾನ್ ಹಣ್ಣುಗಳನ್ನು ಉತ್ಪತ್ತಿ ಮಾಡುತ್ತಿವೆ.

ಲೀಚಿ ಜಾತಿಗೆ ಸೇರಿದ ಈ ಹಣ್ಣು ಮಲೇಷ್ಯನ್ ಭಾಷೆಯ “ರಂಬುಟ್” (ರೋಮ) ಎಂಬ ಪದದಿಂದ ಉತ್ಭವವಾಗಿದೆ, ಕಾರಣ ಹಣ್ಣಿನ ಮೇಲ್ಭಾಗದಲ್ಲಿ ಮೃದುವಾದ ಮುಳ್ಳುಗಳಂತಹ ರಚನೆಯಿದೆ. ರುಚಿಯಲ್ಲಿ ಸಿಹಿ ಹಾಗೂ ಜ್ಯೂಸಿ ಆಗಿರುವ ಈ ಹಣ್ಣು ಆರೋಗ್ಯಕ್ಕೂ ಅಷ್ಟೇ ಲಾಭದಾಯಕವಾಗಿದೆ.

ರಂಬುಟಾನ್ ಹಣ್ಣಿನ ಆರೋಗ್ಯ ಪ್ರಯೋಜನಗಳು:
► ಹೃದಯದ ಆರೋಗ್ಯಕ್ಕಾಗಿ ಶ್ರೇಷ್ಠ:
ರಂಬುಟಾನ್‌ನಲ್ಲಿ ಇರುವ ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟುಗಳು ಹೃದಯ ಸಂಬಂಧಿ ರೋಗಗಳನ್ನು ತಡೆಯುತ್ತವೆ. ಇದು ರಕ್ತದೊತ್ತಡ ನಿಯಂತ್ರಣ ಹಾಗೂ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತವೆ.
► ಜೀರ್ಣಕ್ರಿಯೆ ಸುಧಾರಣೆಗೆ ಸಹಕಾರಿ:
ಈ ಹಣ್ಣಿನಲ್ಲಿರುವ ಪೋಷಕಾಂಶಗಳು ಜೀರ್ಣತಂತ್ರಕ್ಕೆ ನೆರವಾಗಿ ಮಲಬದ್ಧತೆ ನಿವಾರಣೆಗೆ ಸಹಾಯಕವಾಗುತ್ತವೆ. ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕರುಳಿನಲ್ಲಿ ಹಾನಿಕರ ಸೂಕ್ಷ್ಮಜೀವಿಗಳನ್ನು ನಾಶಪಡಿಸುತ್ತವೆ.
► ಕೂದಲು ಮತ್ತು ನೆತ್ತಿಯ ಆರೋಗ್ಯಕ್ಕೆ ಲಾಭಕರ:
ವಿಟಮಿನ್ ಸಿ ಯುತ್ ಕೂದಲು ಮತ್ತು ತ್ವಚೆಗೆ ಪೋಷಣೆಯನ್ನ ನೀಡುತ್ತದೆ. ತಲೆಹೊಟ್ಟು, ತುರಿಕೆ ಸೇರಿದಂತೆ ಹಲವಾರು ತ್ವಚಾ ಸಮಸ್ಯೆಗಳಿಗೆ ಪರಿಹಾರವಾಗುವ ಶಕ್ತಿ ಈ ಹಣ್ಣಿಗೆ ಇದೆ.
► ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಾಯ:
ರಂಬುಟಾನ್‌ನಲ್ಲಿ ಇರುವ ಆ್ಯಂಟಿಆಕ್ಸಿಡೆಂಟುಗಳು ದೇಹದ ಕೋಶಗಳ ರಕ್ಷಣೆಗೆ ನೆರವಾಗಿ, ಹಾನಿಕರ ರಾಡಿಕಲ್‌ಗಳನ್ನು ತಟಸ್ಥಗೊಳಿಸಿ ಕ್ಯಾನ್ಸರ್ ಮುನ್ನೆಚ್ಚರಿಕೆಗೆ ಕಾರಣವಾಗುತ್ತವೆ.

ತಿನ್ನಲು ರುಚಿಯಾದ ರಂಬುಟಾನ್ ಹಣ್ಣು, ಆರೋಗ್ಯದ ಪರಿಪೂರ್ಣ ಮಿತ್ರವೆಂದೆನಿಸಬಹುದು. ಆಹಾರ ದಿನಚರಿಯಲ್ಲಿ ಈ ಹಣ್ಣನ್ನು ಸೇರಿಸಿಕೊಳ್ಳುವ ಮೂಲಕ ದೇಹದ ಸಮಗ್ರ ಆರೋಗ್ಯವನ್ನು ಉತ್ತಮಗೊಳಿಸಬಹುದಾಗಿದೆ.