
ಲಿಂಬು ನೀರು ಕುಡಿಯುವುದರಿಂದ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುವುದನ್ನು ತಡೆಗಟ್ಟಬಹುದು ಎಂಬ ಅಂಶವನ್ನು ವೈದ್ಯಕೀಯ ಸಂಶೋಧನೆಗಳು ದೃಢಪಡಿಸಿವೆ. ವಿಶೇಷವಾಗಿ, ಮೂತ್ರಪಿಂಡದ ಕಲ್ಲಿನಿಂದ ಬಳಲುತ್ತಿರುವ ರೋಗಿಗಳು ದಿನಕ್ಕೆ 125 ಮಿಲಿಲೀಟರ್ ಲಿಂಬು ನೀರು ಸೇವಿಸಿದರೆ, ಸಮಸ್ಯೆಯಿಂದ ಶೀಘ್ರವೇ ಮುಕ್ತಿ ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ. ಲಿಂಬು ನೀರು ಮೂತ್ರದ ಪಿಎಚ್ ಮಟ್ಟವನ್ನು ಹೆಚ್ಚಿಸಿ, ಮೂತ್ರಪಿಂಡದ ಆರೋಗ್ಯವನ್ನು ಸುಧಾರಿಸುತ್ತದೆ.
ಲಿಂಬು ನೀರಿನ ಇತರ ಪ್ರಯೋಜನಗಳು
ಲಿಂಬು ನೀರು ಕೇವಲ ಮೂತ್ರಪಿಂಡದ ಸಮಸ್ಯೆಗೆ ಮಾತ್ರವಲ್ಲದೆ, ದೇಹದ ಹಲವು ರೋಗಗಳಿಗೆ ಪರಿಹಾರವಾಗಿದೆ. ಪ್ರತಿದಿನ ಒಂದು ಲೋಟ ಲಿಂಬು ನೀರು ಕುಡಿಯುವ ಅಭ್ಯಾಸವು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ, ದಣಿವನ್ನು ಕಡಿಮೆ ಮಾಡುತ್ತದೆ ಮತ್ತು ಉತ್ಸಾಹವನ್ನು ಉಂಟುಮಾಡುತ್ತದೆ. ಬೇಸಿಗೆಯಲ್ಲಿ ಲಿಂಬು ನೀರಿನ ಬೇಡಿಕೆ ಹೆಚ್ಚಾಗುತ್ತದೆ. ಇದು ಎಲ್ಲ ಋತುಗಳಲ್ಲಿ ಸಿಗುವ ಹಣ್ಣಾಗಿದ್ದು, ವಿಟಮಿನ್ ಸಿ, ಖನಿಜಾಂಶಗಳು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ.
ಜೀರ್ಣಕ್ರಿಯೆ ಮತ್ತು ತೂಕ ಕಡಿಮೆಗೊಳಿಸಲು ಸಹಾಯಕ
ಬೆಳಗ್ಗೆ ಖಾಲಿ ಹೊಟ್ಟೆಗೆ ಬೆಚ್ಚಗಿನ ಲಿಂಬು ನೀರು ಕುಡಿಯುವ ಪದ್ಧತಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ದೇಹದಲ್ಲಿ ಆಮ್ಲದ ಹಿಮ್ಮುಖ ಹರಿವನ್ನು ತಡೆದು, ಮಲಬದ್ಧತೆಯನ್ನು ನಿವಾರಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯಲ್ಲಿನ ವಿಷಕಾರಿ ಅಂಶಗಳನ್ನು ತೊಡೆದುಹಾಕಿ, ಅಜೀರ್ಣ, ಹೊಟ್ಟೆ ಉಬ್ಬರ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ, ಚಯಾಪಚಯ ಕ್ರಿಯೆಯನ್ನು ಸುಧಾರಿಸಿ, ಕೊಬ್ಬನ್ನು ಕರಗಿಸಿ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಚರ್ಮದ ಆರೋಗ್ಯಕ್ಕೆ ಲಿಂಬು ನೀರಿನ ಪ್ರಯೋಜನ
ಲಿಂಬು ನೀರು ದೇಹದ ನಂಜನ್ನು ಹೊರಹಾಕಿ ಚರ್ಮವನ್ನು ಹೊಳಪುಗೊಳಿಸುತ್ತದೆ. ಪ್ರತಿದಿನ ಬೆಳಗ್ಗೆ ಬೆಚ್ಚಗಿನ ಲಿಂಬು ನೀರು ಕುಡಿಯುವುದರಿಂದ ಚರ್ಮದ ಆರೋಗ್ಯ ಸುಧಾರಿಸುತ್ತದೆ. ಇದು ಚರ್ಮದ ಸಮಸ್ಯೆಗಳನ್ನು ನಿವಾರಿಸಿ, ಹೊಳಪು ಮತ್ತು ಸ್ವಾಸ್ಥ್ಯವನ್ನು ನೀಡುತ್ತದೆ.
ಉರಿಯೂತ ಮತ್ತು ರಕ್ತಹೀನತೆಗೆ ಪರಿಹಾರ
ಲಿಂಬುನಲ್ಲಿ ಅಂಟಿಆಕ್ಸಿಡೆಂಟ್ಸ್, ಪೊಟ್ಯಾಷಿಯಂ, ಫೋಲೇಟ್ ಮತ್ತು ಫ್ಲೇವನಾಯ್ಡ್ಗಳು ಹೇರಳವಾಗಿವೆ. ಇವು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತವೆ. ಅಲ್ಲದೆ, ಲಿಂಬುವಿನಲ್ಲಿರುವ ವಿಟಮಿನ್ ಸಿ ಆಹಾರದಲ್ಲಿರುವ ಕಬ್ಬಿಣವನ್ನು ದೇಹವು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ರಕ್ತಹೀನತೆಯಿಂದ ಬಳಲುವವರಿಗೆ ಉತ್ತಮ ಪರಿಹಾರ ಸಿಗುತ್ತದೆ.