
ಹೋಳಿ ಹುಣ್ಣಮೆ
ಹುಣ್ಣಿಮೆಯ ಚಂದ್ರ ಬಹಳ ಆನಂದವನ್ನು ಕೊಡುತ್ತಾನೆ. ಅದನ್ನು ಆಸ್ವಾದಿಸಿದವನಿಗೆ ಇದರ ಅನುಭವವಿಸುತ್ತದೆ. ಪಾಲ್ಗುಣ ಮಾಸದ ಈ ಹುಣ್ಣಿಮೆ ಈ ವರ್ಷದ ಚಂದ್ರಮಾನದ ಕೊನೆಯ ಹುಣ್ಣಿಮೆ. ಆದ್ದರಿಂದ ಈ ಹುಣ್ಣಿಮೆ ಬಹಳ ಮಹತ್ವಪೂರ್ಣವಾಗಿದೆ. ಆನಂದದಾಯಕವಾಗಿದೆ. ಹಿಂದಿನ ದಿವಸ ನಡೆಸಿದ ಕಾಮದಹನದಿಂದ ಹೊಸ ಚಿಂತನೆಯೊಂದಿಗೆ ನಾವು ಎದ್ದಿದ್ದೇವೆ. ಈ ದಿನ ಈ ಹೊಸತನದ ಉದ್ದೇಶಕ್ಕಾಗಿ ಹಾಗೂ ಬದಲಾವಣೆಯ ಸಂಕೇತಕ್ಕಾಗಿ ಪರಸ್ಪರ ಬಣ್ಣಗಳನ್ನು ಎರಚಿಕೊಳ್ಳುವುದು ಸಂಪ್ರದಾಯ. ನಮ್ಮ ಬಣ್ಣವನ್ನು ಬದಲಿಸಿಕೊಳ್ಳಬೇಕು. ಶುಭ್ರವಾದ ಚರಿತ್ರಯವನ್ನು ಹೊಂದಬೇಕು. ಎನ್ನುವ ಉದ್ದೇಶದಿಂದ ಬಣ್ಣವನ್ನು ಎರಚಿಕೊಂಡು ಅದನ್ನು ತೊಳೆದುಕೊಂಡು ಶುದ್ಧರಾಗುವುದು. ಈ ನಿಟ್ಟಿನಲ್ಲಿ ಹೊಸ ವರ್ಷದ ಹುಣ್ಣಿಮೆಯನ್ನು ಸ್ವಾಗತಿಸಿದರೆ ಮತ್ತಷ್ಟು ಆನಂದದಾಯಕವಾಗುತ್ತದೆಯಲ್ಲವೇ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ



































