

ಕೆ ಎಂ ಈ ಎಸ್ ಶಿಕ್ಷಣ ಸಂಸ್ಥೆಯು “ಕೆ ಎಂ ಈ ಎಸ್ ಪ್ರತಿಭೋತ್ಸವದ ” ಅಂಗವಾಗಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ದಿನಾಂಕ 05/02/2025 ರಂದು ಸಂಸ್ಥೆಯ ಅಧ್ಯಕ್ಷರಾದ ಕೆ ಎಸ್ ಇಮ್ತಿಯಾಜ್ ಅಹಮದ್ ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಇವರು ” ಪಠ್ಯದ ಜೊತೆಗೆ ಮಕ್ಕಳಲ್ಲಿರುವ ವಿವಿಧ ಪ್ರತಿಭೆಗಳನ್ನು ಹೊರ ತರುವ ಉದ್ದೇಶದಿಂದ” ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂಬುದಾಗಿ ತಿಳಿಸಿದರು.
ಪ್ರಥಮ ದಿನದಂದು 5 ನೇ, 6ನೇ, 7 ನೇ ತರಗತಿಯ ಮಕ್ಕಳಿಂದ FUSION FIESTA ಎಂಬ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಈ ಸಂಭ್ರಮದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕೆ ಎಂ ಈ ಎಸ್ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿನಿಯಾದ ಸ್ಪಂದನ ಇವರು “ಮಕ್ಕಳು ಪಠ್ಯವನ್ನು ಅಭ್ಯಾಸ ಮಾಡುವುದರ ಜೊತೆಗೆ ಹೊರ ಜಗತ್ತಿನಲ್ಲಿ ನಡೆಯುವ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮನೋಭಾವವನ್ನು ಬೆಳೆಸಿಕೊಂಡು ಆತ್ಮವಿಶ್ವಾಸದಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ” ಸಲಹೆ ನೀಡಿದರು.
ಅಂತೆಯೇ ಮತ್ತೋರ್ವ ಹಳೆ ವಿದ್ಯಾರ್ಥಿನಿಯಾದ ತನುಶ್ರೀ “ನಾನು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ನನ್ನನ್ನು ತೊಡಗಿಸಿಕೊಂಡಿದ್ದೇನೆ, ಸಾಧನೆ ಮಾಡಿದ್ದೇನೆ ಎಂದರೆ ಅದಕ್ಕೆ ಬೆನ್ನೆಲುಬಾಗಿ ನಿಂತದ್ದು ನನ್ನ ಶಿಕ್ಷಕರು ಮತ್ತು ನನ್ನ ಕೆ ಎಂ ಈ ಎಸ್ ಶಿಕ್ಷಣ ಸಂಸ್ಥೆ ” ಎಂದು ಹೇಳಿದರು.
ಅಂತೆಯೇ ಈ ಸಮಾರಂಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ರಾಮಚಂದ್ರ ನೆಲ್ಲಿಕಾರ್, ಪ್ರೌಢ ವಿಭಾಗದ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಪಾಟ್ಕರ್, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ಲೊಲಿಟ.ಡಿ. ಸಿಲ್ವ ಸೇರಿದಂತೆ ಶಾಲಾ ಶಿಕ್ಷಕರು, ಸಿಬ್ಬಂದಿಗಳು,ಪೋಷಕರು ಹಾಗೂ ವಿದ್ಯಾರ್ಥಿಗಳು ಸಮಾರಂಭದಲ್ಲಿ ಹಾಜರಿದ್ದರು.