
ಆರೋಗ್ಯವಂತ ಬದುಕಿಗೆ ಸರಿಯಾದ ಆಹಾರ ಸೇವನೆಯೇ ಮುಖ್ಯ. ಮಾಂಸದಂತಹ ಪ್ರೋಟೀನ್ ಮೂಲಗಳನ್ನು ಬಹುಪಾಲು ಜನರು ಆಯ್ಕೆಮಾಡುತ್ತಿದ್ದರೂ, ಹೆಚ್ಚು ಸೇವನೆ ದೇಹದಲ್ಲಿ ಕೊಬ್ಬನ್ನು ಶೇಖರಿಸಬಹುದು. ಈ ಸಮಸ್ಯೆಗೆ ಉತ್ತಮ ಪರ್ಯಾಯವೇ ಹಲಸಿನ ಹಣ್ಣು.
ಹಲಸಿನ ಹಣ್ಣು ಆರೋಗ್ಯದ ಖಜಾನೆ!
ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್, ಫೈಬರ್, ವಿಟಮಿನ್ A, B, C, ಪೊಟ್ಯಾಸಿಯಂ, ಕಬ್ಬಿಣ ಮತ್ತು ಮ್ಯಾಂಗನೀಸ್ ಅಂಶಗಳಿವೆ. ಹೆಚ್ಚು ಪೋಷಕಾಂಶಗಳಿರುವುದರಿಂದ ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮಧುಮೇಹಿಗಳಿಗೆ ವರದಾನ:
ಹಲಸು ಕಡಿಮೆ ಸೆಮಿಕ್ ಸೂಚ್ಯಂಕವನ್ನು ಹೊಂದಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಇದರಲ್ಲಿರುವ ಕಡಿಮೆ ಕ್ಯಾಲೋರಿಗಳು ಮತ್ತು ಹೆಚ್ಚಿನ ಫೈಬರ್ ಮಧುಮೇಹಿಗಳಿಗಾಗಿ ಅತ್ಯುತ್ತಮ ಆಯ್ಕೆ.
ಋತುಮಾನ ಬದಲಾವಣೆಯ ರಕ್ಷಕ:
ಹಲಸಿನಲ್ಲಿ ಇರುವ ವಿಟಮಿನ್ ಸಿ, ಶೀತ, ನೆಗಡಿ, ಜ್ವರ, ಕೆಮ್ಮು ಮುಂತಾದ ಸೋಂಕುಗಳನ್ನು ತಡೆಯಲು ನೆರವಾಗುತ್ತದೆ. ರೋಗ ನಿರೋಧಕ ಶಕ್ತಿಯನ್ನು ದ್ವಿಗುಣಗೊಳಿಸುತ್ತದೆ.
ಹೃದಯ ಆರೋಗ್ಯಕ್ಕೂ ನೆರವು:
ಹಲಸಿನಲ್ಲಿರುವ ಪೊಟ್ಯಾಸಿಯಂ ದೇಹದಲ್ಲಿನ ಸೋಡಿಯಂ ಮಟ್ಟವನ್ನು ಸಮತೋಲನಗೊಳಿಸಿ, ರಕ್ತದೊತ್ತಡ ನಿಯಂತ್ರಿಸಿ, ಹೃದಯದ ಕಾಯಿಲೆಗಳಿಂದ ದೂರವಿರಿಸುತ್ತದೆ.
ಕೂದಲಿಗಾಗಿ ಸಹ ಪರಿಣಾಮಕಾರಿ:
ವಿಟಮಿನ್ A ಸಮೃದ್ಧವಾಗಿರುವ ಹಲಸು, ಕೂದಲು ಗಟ್ಟಿಯಾಗಿಸಲು ಸಹಕಾರಿಯಾಗುತ್ತದೆ.

ಶಕ್ತಿದಾಯಕವೂ , ಸವಿಯಾದ ಆಹಾರವೂ ಆದ ಹಲಸಿನ ಹಣ್ಣಿನಲ್ಲಿರುವ ನೈಸರ್ಗಿಕ ಪೋಷಕಾಂಶಗಳು ದೇಹಕ್ಕೆ ಬೇಕಾದ ಶಕ್ತಿ ನೀಡುವ ಜೊತೆಗೆ, ರುಚಿಕರತೆಯಿಂದ ಆಹಾರದ ಸ್ವಾದವನ್ನೂ ಹೆಚ್ಚಿಸುತ್ತವೆ.