
ಕಲ್ಲಂಗಡಿಯಲ್ಲಿ ವಿಟಮಿನ್ ಎ, ಬಿ, ಸಿ, ಪೊಟ್ಯಾಸಿಯಮ್, ಲೈಕೋಪೀನ್ ಮತ್ತು ಬೀಟಾ-ಕ್ಯಾರೋಟಿನ್ ನಂತಹ ಪೋಷಕಾಂಶಗಳಿವೆ. ಇದು ದೇಹಕ್ಕೆ ತುಂಬಾ ಉಪಯುಕ್ತವಾಗಿದೆ. ಲೈಕೋಪೀನ್ ಎಂಬ ಆಂಟಿಆಕ್ಸಿಡೆಂಟ್ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಆದರೆ, ತಜ್ಞರ ಪ್ರಕಾರ ಕಲ್ಲಂಗಡಿಯನ್ನು ಕತ್ತರಿಸಿದ ನಂತರ ಫ್ರಿಡ್ಜ್‌ನಲ್ಲಿ ಇಟ್ಟರೆ ಈ ಪೋಷಕಾಂಶಗಳು ಕಡಿಮೆಯಾಗುತ್ತವೆ. ವಿಶೇಷವಾಗಿ ಲೈಕೋಪೀನ್, ವಿಟಮಿನ್ ಎ ಮತ್ತು ಸಿ ಅಂಶಗಳು ಕಡಿಮೆಗೊಳ್ಳುತ್ತವೆ. ಜೊತೆಗೆ ಹಣ್ಣಿನ ರಸ ಕಹಿಯಾಗುತ್ತದೆ, ರುಚಿಯೂ ಕುಸಿಯುತ್ತದೆ.
ಫ್ರಿಡ್ಜ್‌ನಲ್ಲಿ ಇರಿಸಿದ ಕತ್ತರಿಸಿದ ಕಲ್ಲಂಗಡಿ ಸೇವನೆಯ ಪರಿಣಾಮ:
ಹಣ್ಣಿನಲ್ಲಿ ತೇವಾಂಶ ಉಳಿದುಕೊಳ್ಳುವುದರಿಂದ ಬ್ಯಾಕ್ಟೀರಿಯಾ ಬೆಳೆಯಲು ಅನುವು ಮಾಡಿಕೊಡುತ್ತದೆ.
ಆಹಾರ ವಿಷ ಸಮಸ್ಯೆಗೆ ಕಾರಣವಾಗಬಹುದು.
ಚಿಕ್ಕ ಮಕ್ಕಳು ಮತ್ತು ವೃದ್ಧರು ಫ್ರಿಡ್ಜ್‌ನಲ್ಲಿಟ್ಟ ಕಲ್ಲಂಗಡಿ ತಿನ್ನಬಾರದು.
ರಾತ್ರಿ ವೇಳೆ ತಣ್ಣನೆಯ ಕಲ್ಲಂಗಡಿ ಸೇವನೆಯ ಅಪಾಯ:
ಶೀತ, ಕೆಮ್ಮು ಮತ್ತು ಗಂಟಲು ಸಮಸ್ಯೆಗಳು ಉಂಟಾಗಬಹುದು.
ಜೀರ್ಣಕ್ರಿಯೆ ನಿಧಾನಗೊಂಡು ಅಜೀರ್ಣ ಸಮಸ್ಯೆಗೆ ಕಾರಣವಾಗಬಹುದು.
ನೀರಿನ ಅಂಶ ಅಧಿಕವಾಗಿರುವುದರಿಂದ ನಿದ್ರೆಗೆ ಅಡ್ಡಿಯಾಗುವಷ್ಟು ಭಾರಿ ಮೂತ್ರ ವಿಸರ್ಜನೆ ಸಂಭವಿಸಬಹುದು.
ಸುರಕ್ಷಿತ ಸೇವನೆಗಾಗಿ ತಜ್ಞರ ಸಲಹೆ:
ಕತ್ತರಿಸಿದ ಕಲ್ಲಂಗಡಿಯನ್ನು ತಕ್ಷಣವೇ ತಿನ್ನುವುದು ಆರೋಗ್ಯಕ್ಕೆ ಉತ್ತಮ.
ನೀವು ಅದನ್ನು ಫ್ರಿಡ್ಜ್‌ನಲ್ಲಿ ಇರಿಸಬೇಕಾದರೆ, ರಂಧ್ರಗಳಿರುವ ಮುಚ್ಚಳದಿಂದ ಮುಚ್ಚಿ ಮತ್ತು 2-3 ಗಂಟೆಗಳಲ್ಲಿ ಸೇವಿಸಬೇಕು.
ಇಡೀ ಕಲ್ಲಂಗಡಿ ತಿನ್ನಲಾಗದಿದ್ದರೆ, ಅದರಿಂದ ಜ್ಯೂಸ್ ಮಾಡುವುದು ಉತ್ತಮ ಆಯ್ಕೆ.