
ಅನ್ನ ಬಹುತೇಕ ಪ್ರತಿಯೊಬ್ಬರಿಗೂ ನೆಚ್ಚಿನ ಆಹಾರ. ಅನೇಕರು ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಅನ್ನವನ್ನು ಸೇವನೆ ಮಾಡುತ್ತಾರೆ. ಆದರೆ ರಾತ್ರಿ ವೇಳೆಯಲ್ಲಿ ಅನ್ನ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ? ತಜ್ಞರು ಏನನ್ನು ಸಲಹೆ ಮಾಡುತ್ತಾರೆ? ಇದರ ಪರಿಣಾಮಗಳೇನು? ಈ ಬಗ್ಗೆ ತಿಳಿಯಿರಿ.
ಅನ್ನ ಸೇವನೆಯ ಹಾನಿಕಾರ ಪರಿಣಾಮಗಳು
1️⃣ ತೂಕ ಹೆಚ್ಚಳ:
ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್ ಸಮೃದ್ಧವಾಗಿದೆ. ರಾತ್ರಿ ಅನ್ನ ಚಯಾಪಚಯ ಕ್ರಿಯೆ ನಿಧಾನಗೊಳ್ಳುತ್ತದೆ, ಈ ಹೆಚ್ಚುವರಿ ಕ್ಯಾಲೊರಿ ದೇಹದಲ್ಲಿ ಕೊಬ್ಬಾಗಿ ಸಂಗ್ರಹವಾಗುತ್ತದೆ.
2️⃣ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆ:
ಅನ್ನದಲ್ಲಿ ಗ್ಲೈಸೆಮಿಕ್ ಸೂಚ್ಯಂಕ ಅಧಿಕವಾಗಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಕ್ಷಣ ಏರಿಸುವ ಸಾಧ್ಯತೆ ಇದೆ. ಇದು ಮಧುಮೇಹಕ್ಕೆ ಹೆಚ್ಚಳ ಮಾಡಬಹುದು.
3️⃣ ಜೀರ್ಣಕ್ರಿಯೆಗೆ ತೊಂದರೆ:
ರಾತ್ರಿ ಹೊತ್ತಿನಲ್ಲಿ ಅನ್ನ ಸೇವನೆಯಿಂದ ಗ್ಯಾಸ್ಟ್ರಿಕ್, ಆಮ್ಲೀಯತೆ, ಉಬ್ಬರ ಉಂಟಾಗಬಹುದು. ಇದು ನಿದ್ರೆಗೆ ಅಡ್ಡಿಯಾಗಬಹುದು.
4️⃣ ಹೊಟ್ಟೆಯ ಕೊಬ್ಬು ಹೆಚ್ಚಳ:
ಬಿಳಿ ಅಕ್ಕಿಯಲ್ಲಿ ಫೈಬರ್ ಕಡಿಮೆ ಇರುವ ಕಾರಣ, ಇದನ್ನು ಹೆಚ್ಚಾಗಿ ಸೇವಿಸಿದರೆ ಹೊಟ್ಟೆಯ ಸುತ್ತಲೂ ಕೊಬ್ಬು ಸೇರುತ್ತದೆ.

ರಾತ್ರಿ ಊಟಕ್ಕೆ ಉತ್ತಮ ಆಯ್ಕೆಗಳೇನು?
ಅನ್ನದ ಬದಲು ಫೈಬರ್ ಮತ್ತು ಪ್ರೋಟೀನ್ ಹೆಚ್ಚಿರುವ ಆಹಾರ ಸೇವನೆ ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ
✅ ಚಪಾತಿ, ರೊಟ್ಟಿ
✅ ರಾಗಿ ಮುದ್ದೆ
✅ ತರಕಾರಿ ಸೂಪ್
✅ ಸಲಾಡ್ ಮತ್ತು ಹಸಿರು ತರಕಾರಿ
ಆರೋಗ್ಯಕರ ಜೀವನಶೈಲಿಗೆ ಸಂತುಲಿತ ಆಹಾರ ಸೇವನೆ ಅವಶ್ಯಕ. ಆದ್ದರಿಂದ ರಾತ್ರಿ ಊಟದ ವೇಳೆಯಲ್ಲಿ ಅನ್ನ ಸೇವನೆಯನ್ನು ನಿಯಂತ್ರಿಸಿ ಎಂದು ತಜ್ಞರು ಹೇಳುತ್ತಾರೆ.