
ಹುಣಸೆಹಣ್ಣು ಅಡುಗೆಯಲ್ಲಿ ಹುಳಿಗೆ ರುಚಿ ನೀಡುವ ಪ್ರಮುಖ ಪದಾರ್ಥ. ಆದರೆ ಇದರ ಉಪಯೋಗ ಕೇವಲ ಅಡುಗೆಯಲ್ಲಿ ಮಾತ್ರ ಸೀಮಿತವಲ್ಲ. ಇದು ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಸಹಕಾರಿಯಾಗಿದೆ. ವಿಟಮಿನ್ ಸಿ, ಬಿ, ಪೊಟಾಸಿಯಂ, ಕಬ್ಬಿಣ, ಮೆಗ್ನೀಷಿಯಂ ಮುಂತಾದ ಬಹುಮೌಲ್ಯ ಖನಿಜಗಳ ಸಮೃದ್ಧಿ ಹೊಂದಿರುವ ಹುಣಸೆಹಣ್ಣು, ಚಳಿಗಾಲದಲ್ಲಿ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಮಾಡುತ್ತದೆ.

ಹುಣಸೆಹಣ್ಣಿನ ಪ್ರಮುಖ ಆರೋಗ್ಯ ಪ್ರಯೋಜನಗಳು:
ಜೀರ್ಣಶಕ್ತಿ ಉತ್ತೇಜನೆ: ನಾರಿನ ಅಂಶದಿಂದ ಜೀರ್ಣಕ್ರಿಯೆ ಸುಗಮವಾಗಿ ನಡೆಯುತ್ತಿದ್ದು, ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
ಹೃದಯ ಆರೋಗ್ಯ: ಕೊಲೆಸ್ಟ್ರಾಲ್ ಇಳಿಕೆ ಮತ್ತು ರಕ್ತದೊತ್ತಡ ನಿಯಂತ್ರಣ ಮೂಲಕ ಹೃದಯದ ಆರೋಗ್ಯ ಕಾಪಾಡುತ್ತದೆ.
ಸಕ್ಕರೆ ಕಾಯಿಲೆಗೆ ಸಹಕಾರಿ: ಇನ್ಸುಲಿನ್ ಪ್ರತಿರೋಧತೆ ಕಡಿಮೆ ಮಾಡಿ ಬ್ಲಡ್ ಶುಗರ್ ಲೆವೆಲ್ ಕಂಟ್ರೋಲ್ ಮಾಡುತ್ತದೆ.
ಉರಿಯೂತ ನಿವಾರಣೆ: ಆಂಟಿ ಇನ್ಫ್ಲಮೇಟರಿ ಗುಣಗಳಿಂದ ಕೀಲು ನೋವು, ಮೈನೋವು ನಿವಾರಣೆಗೆ ಸಹಕಾರಿಯಾಗಿದೆ.
ತೂಕ ನಿಯಂತ್ರಣ: ಹೊಟ್ಟೆ ತುಂಬಿದ ಅನುಭವ ನೀಡುವುದರಿಂದ ಅನವಶ್ಯಕ ಆಹಾರ ಸೇವನೆ ತಪ್ಪಿಸಿ ತೂಕ ನಿಯಂತ್ರಣ ಸಾಧ್ಯ.
ರೋಗನಿರೋಧಕ ಶಕ್ತಿ: ವಿಟಮಿನ್ ಸಿ ಸಹಾಯದಿಂದ ಶಕ್ತಿಶಾಲಿ ರೋಗ ನಿರೋಧಕ ವ್ಯವಸ್ಥೆ ನಿರ್ಮಾಣ.

ಆದುದರಿಂದ, ಪ್ರತಿದಿನದ ಆಹಾರದಲ್ಲಿ ಹುಣಸೆಹಣ್ಣನ್ನು ಸೇರಿಸಿಕೊಳ್ಳುವುದರಿಂದ ರುಚಿಯ ಜೊತೆಗೆ ಆರೋಗ್ಯಕ್ಕೂ ಧಕ್ಕೆಯಿಲ್ಲದ ಲಾಭ ಒದಗುತ್ತದೆ.