
ಅಡುಗೆ ಮನೆಗಳಲ್ಲಿ ಸಾಮಾನ್ಯವಾಗಿ ಕಾಣಿಸುವ ತರಕಾರಿ ಕ್ಯಾರೆಟ್, ತನ್ನ ಆರೋಗ್ಯಕಾರಿ ಲಕ್ಷಣಗಳಿಂದ ಖ್ಯಾತಿ ಪಡೆದಿದೆ. ಕೇವಲ ಪಲ್ಯ ಅಥವಾ ಹಾಲ್ವಾ ತಯಾರಿಕೆಯಲ್ಲಿ ಮಾತ್ರವಲ್ಲ, ಕ್ಯಾರೆಟ್ ಪಾಯಸ, ಸೂಪ್‌ಗಳಲ್ಲಿಯೂ ಇದರ ವಿಭಿನ್ನ ರುಚಿಯನ್ನು ನಾವು ಅನುಭವಿಸಬಹುದು. ಆದರೆ ಇದಕ್ಕೆ ಅಷ್ಟಿಷ್ಟಲ್ಲದಷ್ಟು ಆರೋಗ್ಯ ಲಾಭಗಳೂ ಸಹ ಇವೆ ಎಂಬುದು ವಿಶಿಷ್ಟ.

ಆಯುರ್ವೇದ ಹಾಗೂ ಪೌಷ್ಟಿಕ ತಜ್ಞರ ಪ್ರಕಾರ, ಕ್ಯಾರೆಟ್ ಸೇವನೆಯು ದೇಹಕ್ಕೆ ಈ ಕೆಳಗಿನ ರೀತಿಯಲ್ಲಿ ಲಾಭದಾಯಕ:
🔸 ಕ್ಯಾನ್ಸರ್ ನಿವಾರಣೆ:
ಕ್ಯಾರೆಟ್‌ನಲ್ಲಿ ಅತಿ ಹೆಚ್ಚಿನ ಪ್ರಮಾಣದ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ6 ಮತ್ತು ಆಂಟಿ ಆಕ್ಸಿಡೆಂಟ್ಸ್ ಇದ್ದು, ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ಮೂಲಕ ಶ್ವಾಸಕೋಶ, ಸ್ತನ ಹಾಗೂ ಕರುಳಿನ ಕ್ಯಾನ್ಸರ್ ಸಂಭವವನ್ನು ತಡೆಯಬಹುದು.
🔸 ಹಲ್ಲುಗಳ ರಕ್ಷಣೆ:
ಕ್ಯಾರೆಟ್‌ನಲ್ಲಿ ಇರುವ ನೈಸರ್ಗಿಕ ಖನಿಜಾಂಶಗಳು ಹಲ್ಲುಗಳ ಆರೋಗ್ಯವನ್ನು ಕಾಪಾಡಿ, ಹಾನಿಕಾರಕ ಬ್ಯಾಕ್ಟೀರಿಯಗಳ ಕಾರ್ಯಚಟುವಟಿಕೆಯನ್ನು ತಡೆಯುತ್ತವೆ. ಹಲ್ಲು ಹುಳುಕು ಹಾಗೂ ಹಾನಿಯನ್ನು ಕಡಿಮೆ ಮಾಡುತ್ತದೆ.
🔸 ತ್ವಚೆಗೆ ಹೊಳಪು:
ತುರಿದ ಕ್ಯಾರೆಟ್ ಹಾಗೂ ಜೇನುತುಪ್ಪವನ್ನು ಮಿಶ್ರಣವಾಗಿ ಫೇಸ್ ಮಾಸ್ಕ್ ಆಗಿ ಬಳಸಿದರೆ, ತ್ವಚೆ ಬೆಳಕಾಗುತ್ತಾ ಆರೋಗ್ಯವಾಗಿರುತ್ತದೆ. ಇದರಲ್ಲಿ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟ್ ಅಂಶಗಳು ತ್ವಚೆಯ ಹೊಳಪನ್ನು ಕಾಯ್ದುಕೊಳ್ಳುತ್ತವೆ.
🔸 ಮೂಳೆಗಳಿಗೆ ಬೆಂಬಲ:
ವಿಟಮಿನ್ ಕೆ, ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಇರುವುದರಿಂದ ಮೂಳೆಗಳ ಗಟ್ಟಿತನ ಹೆಚ್ಚಿಸಿ, ಓಸ್ಟಿಯೋಪೊರೋಸಿಸ್ ತಡೆಯಲು ಸಹಾಯ ಮಾಡುತ್ತದೆ.
🔸 ರಕ್ತದ ಒತ್ತಡ ನಿಯಂತ್ರಣ:
ಆಂಟಿ ಇನ್‌ಫ್ಲಮೇಟರಿ ಗುಣವಿರುವ ಕ್ಯಾರೆಟ್ ರಕ್ತನಾಳಗಳ ಒತ್ತಡವನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯ ಸುಧಾರಣೆಗೆ ಸಹಾಯಕವಾಗುತ್ತದೆ.

ಕ್ಯಾರೆಟ್ ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ದೀರ್ಘಕಾಲಿಕ ಆರೋಗ್ಯ ಲಾಭ ಪಡೆಯಬಹುದಾಗಿದೆ. ಬಜೆಟ್ ಫ್ರೆಂಡ್ಲಿ ಆಗಿರುವುದರಿಂದ ಎಲ್ಲರಿಗೂ ಲಭ್ಯವಿರುವ ಈ ತರಕಾರಿ ಆರೋಗ್ಯದ ಶ್ರೇಷ್ಠ ಶಕ್ತಿ ಕೇಂದ್ರವೆಯೇ ಸರಿ!