spot_img

ಹುರುಳಿಕಾಳು: ಆರೋಗ್ಯದ ಕನಸನ್ನು ನನಸು ಮಾಡುವ ಪೌಷ್ಟಿಕ ಧಾನ್ಯ!

Date:

ನಮ್ಮ ಅಡುಗೆಮನೆಯಲ್ಲೇ ಇರುವ ಸಾಮಾನ್ಯ ಧಾನ್ಯವಾದ ಹುರುಳಿಕಾಳು ದೇಹಕ್ಕೆ ಪೋಷಣೆಯ ಒಳ್ಳೆಯ ಬಂಡವಾಳವನ್ನು ಒದಗಿಸುವ ಆಹಾರವಾಗಿದೆ. ಆಯುರ್ವೇದ ಶಾಸ್ತ್ರದಲ್ಲಿಯೂ ಹುರುಳಿಕಾಳಿನ ಮಹತ್ವವನ್ನು ವಿಶದವಾಗಿ ವಿವರಿಸಲಾಗಿದೆ. ಆದರೆ ಇದರ ಪ್ರಯೋಜನಗಳ ಜೊತೆಗೆ ಕೆಲವರೆಗೂ ಇದು ವಿಪರೀತ ಪರಿಣಾಮ ನೀಡಬಹುದೆಂಬ ಎಚ್ಚರಿಕೆಯನ್ನು ವೈದ್ಯಕೀಯ ವಲಯದಲ್ಲಿ ನೀಡಲಾಗುತ್ತಿದೆ.

ಹುರುಳಿಕಾಳಿನ ಆರೋಗ್ಯ ಲಾಭಗಳು:

  • ಪ್ರೋಟೀನ್‌ನ ಭಂಡಾರ: ಹುರುಳಿಕಾಳು ಪ್ರೋಟೀನ್ ಮತ್ತು ಪೋಷಕಾಂಶಗಳಲ್ಲಿ ತುಂಬಿರುತ್ತದೆ. ದೇಹ ದುರ್ಬಲವಾಗಿರುವವರು, ಶಕ್ತಿಹೀನತೆಯಿಂದ ಬಳಲುವವರು ಇದನ್ನು ನಿಯಮಿತವಾಗಿ ಸೇವಿಸಿದರೆ ಶಕ್ತಿ ಪುನಃ ಸಿಗುತ್ತದೆ.
  • ಕಿಡ್ನಿ ಕಲ್ಲಿಗೆ ಪರಿಹಾರ: ಆಯುರ್ವೇದದಲ್ಲಿ ಇದನ್ನು ಅಸ್ಮರಿ ಛೇದಕ ಎಂದೇ ಕರೆಯಲಾಗಿದ್ದು, ಮಲಮೂತ್ರದ ಮಾರ್ಗವನ್ನು ಸ್ವಚ್ಛಗೊಳಿಸಿ ಕಿಡ್ನಿ ಕಲ್ಲನ್ನು ಹೊರಹಾಕುವಲ್ಲಿಯೂ ಸಹಕಾರಿ.
  • ಜೀರ್ಣಕ್ರಿಯೆ ಉತ್ತಮಗೊಳಿಸಿ: ವಾತ ನಿಗ್ರಹಿಸಿ ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ. ಮಲಬದ್ದತೆಯ ಸಮಸ್ಯೆ ಇರುವವರು ಇದರಿಂದ ಲಾಭ ಪಡೆಯಬಹುದು.
  • ಕಣ್ಣುಗಳಿಗೆ ಲಾಭ: ದೃಷ್ಠಿ ಶಕ್ತಿಗೆ ಸಹಕಾರಿಯಾಗುತ್ತದೆ. ನುಗ್ಗೆಕಾಯಿ ಸೊಪ್ಪು ಮತ್ತು ವಿಟಮಿನ್ ಎಯುಳ್ಳ ಆಹಾರಗಳ ಜೊತೆ ಸೇವಿಸಿದರೆ ಪರಿಣಾಮ ಇನ್ನೂ ಉತ್ತಮ.
  • ಸ್ನಾಯು ಬಲವರ್ಧನೆ: ಗಂಟುಗಳನ್ನು ಬಲಿಷ್ಠಗೊಳಿಸುವ ಶಕ್ತಿ ಇದೆ.

ಯಾರಿಗೆ ಹುರುಳಿಕಾಳು ಸೂಕ್ತವಲ್ಲ?:

  • ಹುಳಿತೇಗು ಹಾಗೂ ಹುಣ್ಣು ಸಮಸ್ಯೆ: ಉಷ್ಣತೆಯ ಸ್ವಭಾವ ಇರುವ ಹುರುಳಿಕಾಳು, ದೇಹದಲ್ಲಿ ಉರಿಯೂತ, ಚರ್ಮದ ಸಮಸ್ಯೆ ಇರುವವರಿಗೆ ಸೂಕ್ತವಲ್ಲ.
  • ಅತಿರಕ್ತಸ್ರಾವ: ಋತುಚಕ್ರದಲ್ಲಿ ಹೆಚ್ಚು ರಕ್ತಸ್ರಾವವಿರುವ ಮಹಿಳೆಯರು ಈ ಧಾನ್ಯದಿಂದ ದೂರವಿರಬೇಕು.
  • ಮೂಲವ್ಯಾಧಿ: ರಕ್ತ ಬರುವ ಪೈಲ್ಸ್ ಇರುವವರು ಇದನ್ನು ಸೇವನೆ ಮಾಡದಿರುವುದೇ ಉತ್ತಮ.
  • ಸೀಮಿತ ಸೇವನೆ ಅನಿವಾರ್ಯ: ಬೇಸಿಗೆಯ ಉಷ್ಣತೆಯಲ್ಲಿ ಹೆಚ್ಚು ಸೇವನೆ ಮಾಡಿದರೆ ದೇಹದಲ್ಲಿ ಹೆಚ್ಚು ಉಷ್ಣತೆ ಮೂಡಬಹುದು.

ಹುರುಳಿಕಾಳು ಬಳಕೆಯ ಕೆಲ ಪವರ್‌ಫುಲ್ ಮಾರ್ಗಗಳು:

  • ಪಲ್ಯ, ಸಾಂಬಾರಿನಲ್ಲಿ ಸೇರಿಸಿ ಸೇವನೆ
  • ಮೊಳಕೆ ಹಾಕಿ ಸಲಾಡ್ ರೂಪದಲ್ಲಿ ಉಪಯೋಗ
  • ಸೂಪ್ ರೂಪದಲ್ಲಿ ಆರೈಕೆ
  • ರುಚಿಗೆ ಅನುಗುಣವಾಗಿ ಉಪಾಹಾರ

ಆಯುರ್ವೇದವೂ ಶ್ಲಾಘಿಸಿದ ಹುರುಳಿಕಾಳನ್ನು ದಿನ ನಿತ್ಯದ ಆಹಾರದಲ್ಲಿ ಬಳಸಿ ಆರೋಗ್ಯವಂತರಾಗಿರೋಣ …..

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಹಿರಿಯಡ್ಕ ಕರ್ನಾಟಕ ಪಬ್ಲಿಕ್ ಸ್ಕೂಲ್ ಶಿಕ್ಷಣ ಸಂಸ್ಥೆಗೆ ಉತ್ತಮ ಫಲಿತಾಂಶ

2024-25ನೇ ಶೈಕ್ಷಣಿಕ ಸಾಲಿನ SSLC ಫಲಿತಾಂಶ ಪ್ರಕಟಗೊಂಡಿದ್ದು , ಹಿರಿಯಡ್ಕದ ಕರ್ನಾಟಕ ಪಬ್ಲಿಕ್ ಸ್ಕೂಲ್ ನ 176 ವಿದ್ಯಾರ್ಥಿಗಳಲ್ಲಿ 153 ವಿದ್ಯಾರ್ಥಿಗಳು ತೇರ್ಗಡೆಯಾಗಿ ಸಂಸ್ಥೆಗೆ 87 % ಫಲಿತಾಂಶ ಬಂದಿರುತ್ತದೆ .

ವೈಶಾಖ ಮಾಸದ ಪವಿತ್ರ ಸಂದರ್ಭದಲ್ಲಿ ಆರಂಭವಾದ ಚಾರ್‌ಧಾಮ್ ಯಾತ್ರೆ; ಕೇದಾರನಾಥದಲ್ಲಿ ಭಕ್ತರಿಗೆ ದೇವರ ದರ್ಶನ, ಭದ್ರತೆಗೆ ತೀವ್ರ ಕ್ರಮ

ವೈಶಾಖ ಮಾಸದ ಪವಿತ್ರ ಸಂದರ್ಭದಲ್ಲಿ ಪ್ರಪಂಚದ ಅತ್ಯಂತ ಪವಿತ್ರ ಯಾತ್ರೆಗಳಲ್ಲೊಂದು ಎಂದು ಪರಿಗಣಿಸಲಾದ ಚಾರ್‌ಧಾಮ್ ಯಾತ್ರೆಗೆ ಇಂದು ಭಕ್ತಿಭರಿತ ಚಾಲನೆ ದೊರಕಿದೆ.

ಅನೈತಿಕ ಸಂಬಂಧ ಶಂಕೆ: ಪತ್ನಿ ಹಾಗೂ ಪ್ರೇಮಿಯನ್ನು ಕೊಂದ ಪತಿ !

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ಪತ್ನಿಯ ಅನೈತಿಕ ಸಂಬಂಧದ ಶಂಕೆಯಿಂದ ಕೋಪಗೊಂಡ ಪತಿಯೊಬ್ಬನು, ಪತ್ನಿ ಹಾಗೂ ಆಕೆಯ ಪ್ರೇಮಿಯನ್ನು ಭೀಕರವಾಗಿ ಕೊಲೆ ಮಾಡಿ, ನಂತರ ತಾನೇ ಪೊಲೀಸ್ ಠಾಣೆಗೆ ಶರಣಾಗಿರುವ ಘಟನೆ ನಡೆದಿದೆ.

ಕೆ.ಎಂ.ಇ.ಎಸ್ ಶಿಕ್ಷಣ ಸಂಸ್ಥೆಗೆ ಉತ್ತಮ ಫಲಿತಾಂಶ

ಕುಕ್ಕುಂದೂರು ಕೆ.ಎಂ.ಇ.ಎಸ್ ಶಿಕ್ಷಣ ಸಂಸ್ಥೆಗೆ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಾಗಿದೆ.