
ಪ್ರಕೃತಿಯ ಅತ್ಯದ್ಭುತ ಕೊಡುಗೆಗಳಲ್ಲಿ ಒಂದಾದ ದಾಸವಾಳ ಹೂವು ಕೇವಲ ಸೌಂದರ್ಯವನ್ನಷ್ಟೇ ನೀಡುವುದಲ್ಲದೆ, ಅದರಲ್ಲಿರುವ ಔಷಧೀಯ ಗುಣಲಕ್ಷಣಗಳಿಂದ ಅನೇಕ ಆರೋಗ್ಯ ಸಮಸ್ಯೆಗಳ ನಿವಾರಣೆಯಲ್ಲೂ ಮಹತ್ತರದ ಪಾತ್ರ ವಹಿಸುತ್ತದೆ.

ದಾಸವಾಳದ ಹೂವಿನಿಂದ ತಯಾರಿಸುವ ಚಹಾ ಮಧುಮೇಹ, ರಕ್ತದೊತ್ತಡ, ಸ್ಥೂಲಕಾಯ ಮತ್ತು ಯಕೃತ್ ಸಮಸ್ಯೆಗಳ ವಿರುದ್ಧ ಪರಿಣಾಮಕಾರಿ ಎಂದು ಹಲವಾರು ಅಧ್ಯಯನಗಳು ದೃಢಪಡಿಸಿವೆ. ಇದರಲ್ಲಿ ಹೈಪೋಗ್ಲೈಸೆಮಿಕ್ (ರಕ್ತದ ಸಕ್ಕರೆ ಇಳಿಸುವ) ಹಾಗೂ ಹೈಪೋಲಿಪಿಡೆಮಿಕ್ (ಕೆಟ್ಟ ಕೊಲೆಸ್ಟ್ರಾಲ್ ಇಳಿಸುವ) ಗುಣಲಕ್ಷಣಗಳು ಇವೆ.

ದಾಸವಾಳ ಹೂವಿನ ಸೇವನೆಯ ಲಾಭಗಳು :
ರಕ್ತದ ಸಕ್ಕರೆ ನಿಯಂತ್ರಣ: ಮಧುಮೇಹ ಇದ್ದವರು ನಿಯಮಿತವಾಗಿ ಸೇವಿಸಿದರೆ ಪ್ರಯೋಜನ.
ಕ್ಯಾನ್ಸರ್ ವಿರೋಧಿ: ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುವ ಪ್ರೊಟೊಕಾಟೆಚುಯಿಕ್ ಆಮ್ಲವನ್ನು ಹೊಂದಿದೆ.
ಯಕೃತ್ತಿಗೆ ರಕ್ಷಣೆ: ದಾಸವಾಳದ ಚಹಾ ಯಕೃತ್‌ಗೆ ಉಪಶಮನ ನೀಡುತ್ತದೆ, ವಿಶೇಷವಾಗಿ ಕೀಮೋಥೆರಪಿ ನಂತರ.
ಹೃದಯದ ರಕ್ಷಣೆಗೆ ಬೆಸ್ಟ್: ಕಾರ್ಡಿಯೋ ಪ್ರೊಟೆಕ್ಟಿವ್ ಗುಣಗಳಿಂದ ಹೃದಯದ ಕಾಯಿಲೆಗಳನ್ನು ತಡೆಯುತ್ತದೆ.
ತೂಕ ಇಳಿಕೆಗೆ ಸಹಾಯಕ: ದಾಸವಾಳದ ಸಾರ ಕೊಬ್ಬನ್ನು ಸಂಗ್ರಹಿಸದಂತೆ ತಡೆಯುತ್ತದೆ.
ಸ್ತ್ರೀಸಂಬಂಧಿ ಸಮಸ್ಯೆಗಳಿಗೆ ಪರಿಹಾರ: ಋತುಚಕ್ರದ ನೋವು ಮತ್ತು ಸೆಳೆತವನ್ನು ನಿವಾರಿಸುತ್ತದೆ.
ಮನಸ್ಸಿನ ನೆಮ್ಮದಿ: ಖಿನ್ನತೆ ನಿವಾರಣೆಗೆ ಸಹಾಯ ಮಾಡುತ್ತದೆ.

ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ದಾಸವಾಳ ಚಹಾ, ಪ್ರತಿದಿನದ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ದೇಹದ ಇಮ್ಯುನಿಟಿ ಹೆಚ್ಚಿಸಿ ಒಟ್ಟು ಆರೋಗ್ಯವನ್ನು ಸುಧಾರಿಸುತ್ತದೆ.