
ಮೊಸರು ನಮ್ಮ ದೈನಂದಿನ ಆಹಾರದಲ್ಲಿ ಅನಿವಾರ್ಯ ಅಂಶ. ಮೊಸರು ತಿನ್ನುವುದರಿಂದ ಹೃದಯ ಆರೋಗ್ಯ ಉತ್ತಮವಾಗಿದ್ದು, ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಮೊಸರಿಗೆ ಅನ್ನ, ಬೆಲ್ಲ ಸೇರಿಸಿ ಸೇವಿಸಿದರೆ ಮೂಲವ್ಯಾಧಿ ನಿವಾರಣೆ ಆಗುತ್ತದೆ. ಮೊಸರು, ಮೆಂತ್ಯೆಕಾಳು ಹಾಗೂ ಅರಿಶಿನ ಬಳಕೆಯಿಂದ ಮಲಬದ್ಧತೆ ತಡೆಗಟ್ಟಬಹುದು.
ಚರ್ಮ ಮತ್ತು ಕೂದಲಿಗೆ ಮೊಸರಿನ ಪ್ರಯೋಜನ:
*ಮುಖದ ಕಾಂತಿ ಹೆಚ್ಚಿಸಲು ನಿಂಬೆ, ಕಿತ್ತಳೆ ರಸ, ಮೊಸರು ಹಾಗೂ ಆಲಿವ್ ಎಣ್ಣೆ ಬಳಸಿ ಲೇಪಿಸಬಹುದು.
*ಕಪ್ಪುಕಲೆ ನಿವಾರಣೆಗೆ ನಿಂಬೆ ಸಿಪ್ಪೆ ಪುಡಿ, ಮೊಸರು ಬಳಸಿ ಪೇಸ್ಟ್ ತಯಾರಿಸಬಹುದು.
*ಕೂದಲಿಗೆ ಹೊಳಪು ನೀಡಲು ಮೊಸರು ಮಸಾಜ್ ಮಾಡುವುದು ಶ್ರೇಷ್ಠ.
*ಹುಳಿ ಮೊಸರಿನಲ್ಲಿ ಲಿಂಬೆರಸ, ಮುಲ್ತಾನಿ ಮಿಟ್ಟಿ ಸೇರಿಸಿ ತಲೆಗೆ ಹಚ್ಚುವುದರಿಂದ ಹೊಟ್ಟಿನ ಸಮಸ್ಯೆ ಕಡಿಮೆಯಾಗುತ್ತದೆ.
*ಮೊಸರು, ಮೆಹಂದಿ ಮತ್ತು ನೆಲ್ಲಿಕಾಯಿ ಪುಡಿ ಸೇರಿಸಿದ ಲೇಪನದಿಂದ ಕೂದಲು ಉದುರುವುದನ್ನು ತಡೆಗಟ್ಟಬಹುದು.