
ಪೇರಳೆ ಎಲೆಗಳು ಉತ್ಕರ್ಷಣ ನಿರೋಧಕಗಳು, ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಸೇರಿದಂತೆ ಹಲವು ಪೋಷಕಾಂಶಗಳನ್ನು ಒಳಗೊಂಡಿದೆ. ಈ ಎಲೆಗಳಲ್ಲಿ ಪ್ರೋಟೀನ್, ವಿಟಮಿನ್ C, ವಿಟಮಿನ್ B, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೇಶಿಯಂ, ಪೊಟ್ಯಾಸಿಯಂ ಮತ್ತು ಹಲವಾರು ಜೀವಸತ್ವಗಳು ಅಡಕವಾಗಿದೆ.
ಪೇರಳೆ ಎಲೆಗಳ ಮಹತ್ವ ಮತ್ತು ಪ್ರಯೋಜನಗಳು:
➤ ಮಧುಮೇಹ ನಿಯಂತ್ರಣ: ಪೇರಳೆ ಎಲೆಗಳಲ್ಲಿ ಫೀನಾಲಿಕ್ ಅಂಶವಿದ್ದು, ಇದು ಹೈಪರ್ಗ್ಲೈಸೆಮಿಕ್ ವಿರೋಧಿ ಗುಣ ಹೊಂದಿದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯವಾಗುತ್ತದೆ.
➤ ರಕ್ತದೊತ್ತಡ ನಿಯಂತ್ರಣ: ಪೇರಳೆ ಎಲೆಗಳಲ್ಲಿರುವ ಪೊಟ್ಯಾಸಿಯಮ್ ಮತ್ತು ಫೈಬರ್ ಎಲೆಗಳು ಬಿಪಿ ನಿಯಂತ್ರಣಕ್ಕೆ ಸಹಾಯಕ.
➤ ಕರಳು ಆರೋಗ್ಯ: ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಂದ ಕರುಳಿನ ಆರೋಗ್ಯವನ್ನು ಸುಧಾರಿಸುತ್ತವೆ ಮತ್ತು ಜೀರ್ಣಕ್ರಿಯೆಗೆ ಉತ್ತಮ.
➤ ಕಲೆ, ಮೊಡವೆ ನಿವಾರಣೆ: ಪೇರಳೆ ಎಲೆಯ ಕಷಾಯ ನೈಸರ್ಗಿಕ ರಕ್ತ ಶುದ್ಧೀಕರಕವಾಗಿದ್ದು, ಮುಖದ ಕಲೆ, ಮೊಡವೆ ನಿವಾರಣೆಗೆ ಸಹಕಾರಿಯಾಗುತ್ತದೆ.
➤ ತೂಕ ಇಳಿಕೆ: ಪೇರಳೆ ಎಲೆಗಳಿಂದ ತಯಾರಿಸಿದ ಕಷಾಯ ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸಿ ತೂಕ ಕಡಿಮೆ ಮಾಡುತ್ತದೆ.
ಮುನ್ನೆಚ್ಚರಿಕೆಗಳು:
ಪೇರಳೆ ಎಲೆಗಳನ್ನು ಸೇವಿಸುವ ಮೊದಲು ಮಿತವಾಗಿ ಸೇವನೆ ಮಾಡುವುದು ಸೂಕ್ತ. ಹೆಚ್ಚು ಸೇವನೆಯಿಂದ ಉಬ್ಬರು, ಗ್ಯಾಸ್ಸು ಅಥವಾ ಅತಿಸಾರ ಸಮಸ್ಯೆ ಉಂಟಾಗಬಹುದು. ಕೆಲವರಲ್ಲಿ ಅಲರ್ಜಿ ಅಥವಾ ತುರಿಕೆ ಉಂಟಾಗುವ ಸಾಧ್ಯತೆಯಿದೆ. ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ವೈದ್ಯರ ಸಲಹೆ ಪಡೆಯುವುದು ಉತ್ತಮ.