
ಬೆಂಗಳೂರು: ಇಂದು ಹೆಚ್ಚು ಜನರ ಜೀವನಶೈಲಿಯಲ್ಲಿ ಹೆಡ್‌ಫೋನ್ ಹಾಗೂ ಇಯರ್‌ಫೋನ್ ಬಳಕೆ ಅನಿವಾರ್ಯವಾದಂತಾಗಿದೆ. ಆದರೆ ಅದನ್ನು ಹೆಚ್ಚು ಗಂಟೆಗಳ ಕಾಲ ಬಳಸುವುದು, ಹೆಚ್ಚಿನ ವಾಲ್ಯೂಮ್‌ನಲ್ಲಿ ಸಂಗೀತ ಕೇಳುವುದು ಕಿವಿ ಹಾಗೂ ಮೆದುಳಿಗೆ ತೀವ್ರ ಹಾನಿ ಮಾಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಹಠಾತ್ ಶಬ್ದದ ಪರಿಣಾಮ ಕಿವಿಪರದೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಇದರಿಂದ ಕಿವಿನೋವು, ಶ್ರವಣ ದೋಷ ಹಾಗೂ ಕಿವುಡುತನ ಹೆಚ್ಚಾಗುವ ಸಾಧ್ಯತೆಯಿದೆ. ಇತರರೊಂದಿಗೆ ಹೆಡ್‌ಫೋನ್ ಹಂಚಿಕೊಳ್ಳುವುದರಿಂದ ಬ್ಯಾಕ್ಟೀರಿಯಾ ಹರಡುತ್ತವೆ ಮತ್ತು ಕಿವಿ ಸೋಂಕು ಉಂಟಾಗಬಹುದು. ಹಾಗೆಯೇ ಬ್ಲೂಟೂತ್ ಶ್ರವಣ ಸಾಧನಗಳ ಬಳಕೆಯು ಮೆದುಳಿಗೆ ಮಾರಕವಾಗಿದೆ, ಏಕೆಂದರೆ ಅದು ವಿದ್ಯುತ್ಕಾಂತೀಯ ವಿಕಿರಣ ಉಳಿತಾಯದಿಂದ ಮೆದುಳಿನ ಮೇಲೆ ದುಷ್ಪರಿಣಾಮ ಬೀರುತ್ತದೆ.

ತಜ್ಞರ ಪ್ರಕಾರ, ಮುಂಬರುವ 15-20 ವರ್ಷಗಳಲ್ಲಿ ಕಿವುಡುತನ, ತಲೆತಿರುಗುವಿಕೆ, ಕಿವಿ ನೋವು, ಮೆದುಳಿನ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ, ನಿಮ್ಮ ಆರೋಗ್ಯ ರಕ್ಷಿಸಿಕೊಳ್ಳಲು ಜೋರಾಗಿ ವಾಲ್ಯೂಮ್ ಹಾಕುವುದು ಹಾಗೂ ಇಯರ್‌ಫೋನ್ ಬಳಕೆಯನ್ನು ನಿಯಂತ್ರಿಸುವುದು ಅನಿವಾರ್ಯ. ವಿಶೇಷವಾಗಿ ಮಕ್ಕಳನ್ನು ಮೊಬೈಲ್ ಹಾಗೂ ಈ ತಂತ್ರಜ್ಞಾನದ ಸಾಧನಗಳಿಂದ ದೂರವಿಡುವ ಪ್ರಯತ್ನ ಮಾಡಬೇಕಾಗಿದೆ.