
ಜೋಳದ ರೊಟ್ಟಿ ಪ್ರತಿದಿನ ಸೇವಿಸುವುದು ಆರೋಗ್ಯದ ಮೇಲೆ ಸಾಕಷ್ಟು ಹಿತಕರ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂಬುದನ್ನು ಪೌಷ್ಟಿಕತಜ್ಞರು ಒತ್ತಿಹೇಳುತ್ತಿದ್ದಾರೆ. ಜೋಳದಲ್ಲಿ ವಿಟಮಿನ್, ಖನಿಜಗಳು ಮತ್ತು ನಾರಿನಂಶ ಸಮೃದ್ಧವಾಗಿದ್ದು, ದೇಹದ ದೌರ್ಬಲ್ಯ ನಿವಾರಣೆಗೆ ಸಹಕಾರಿ.
ಜೋಳದ ನಾರಿನಂಶವು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮಧುಮೇಹ ಹೊಂದಿರುವವರಿಗೆ ಇದು ಅತ್ಯಂತ ಉಪಯುಕ್ತ. ಇದರಲ್ಲಿ ಕಡಿಮೆ ಸೆಮಿಕ್ ಸೂಚ್ಯಂಕವಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ನೆರವಾಗುತ್ತದೆ. ಚಪಾತಿಗೆ ಬದಲಾಗಿ ಹಲವರು ಈಗ ಜೋಳದ ರೊಟ್ಟಿಯತ್ತ ಮಾರುಹೋಗುತ್ತಿದ್ದಾರೆ.
ಇದಲ್ಲದೆ, ಜೋಳದ ರೊಟ್ಟಿ ಮೂಳೆಗಳನ್ನು ಬಲಪಡಿಸಿ, ಜೀರ್ಣಕ್ರಿಯೆಯ ಸುಧಾರಣೆಗೆ ಸಹಾಯ ಮಾಡುತ್ತದೆ. ಮಲಬದ್ಧತೆ, ರಕ್ತಹೀನತೆ ಮುಂತಾದ ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿ. ಜೋಳದಲ್ಲಿರುವ ಮೆನ್ನೀಸಿಯಮ್, ಕಬ್ಬಿಣ, ತಾಮ್ರ, ಕ್ಯಾಲ್ಸಿಯಂ ಇತ್ಯಾದಿ ಆರೋಗ್ಯ ಪುನಶ್ಚೇತನಕ್ಕೆ ಸಹಕಾರಿಯಾಗಿವೆ.
ಮೆಕ್ಕೆ ಜೋಳದ ರೊಟ್ಟಿ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಹೊಟ್ಟೆ ತುಂಬಿದ ಅನುಭವ ಹೆಚ್ಚು ಸಮಯ ಉಳಿಯುತ್ತದೆ. ಇದು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಹೃದಯದ ಆರೋಗ್ಯಕ್ಕೂ ಇದು ಉತ್ತಮ ಆಯ್ಕೆ ಎನಿಸುತ್ತದೆ.