
ಯಾವುದನ್ನು ಬೇಕಾದರೂ ಬಿಟ್ಟು ಬದುಕಬಹುದು ಆದರೆ ನೀರನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಅದಕ್ಕಾಗಿ ನೀರಿಗೆ ಸಂಸ್ಕೃತದಲ್ಲಿ ಜೀವನ ಎಂದು ಹೆಸರು. ನಮಗೆ ಸಮೃದ್ಧಿಯ ಆರೋಗ್ಯ ಪೂರ್ಣವಾದ ಜೀವನ ಸಿಗಬೇಕಾದರೆ ನೀರು ಅತಿ ಪ್ರಮುಖವಾಗಿದೆ. ನಮ್ಮ ದೇಹದ ಬಹುಭಾಗ ವ್ಯಾಪಿಸಿರುವುದು ನಾವು ತಿಂದ ಆಹಾರ ಅಲ್ಲ ನಾವು ಕುಡಿದ ನೀರು ಮಾತ್ರ. ಪ್ರಪಂಚದಲ್ಲಿ ಭಾರತದಷ್ಟು ನದಿಗಳು ಎಲ್ಲಿಯೂ ಇಲ್ಲ.

ಅಷ್ಟೇ ಅಲ್ಲದೆ ನದಿಗಳನ್ನು ಈ ದೇಶಕ್ಕೆ ಕೊಟ್ಟು ಈ ದೇಶವನ್ನು ಸಮೃದ್ಧವಾಗಿಸಿದ ಹಿಮಾಲಯದಂತಹ ಪರ್ವತ ಶ್ರೇಣಿಗಳು ಪ್ರಪಂಚದಲ್ಲಿ ಬೇರೆ ಕಡೆ ಇಲ್ಲ. ಆದರೆ ದಿನ ಕಳೆದಂತೆ ವರ್ಷಗಳು ಉರುಳಿದಂತೆ ಹಿಮಗಳು ಕರಗಿ ಹೋಗುತ್ತಿವೆ ನದಿಗಳು ಬತ್ತಿ ಹೋಗುತ್ತಿವೆ. ಅದನ್ನು ಉಳಿಸಿ ಬೆಳೆಸಬೇಕು ಎನ್ನುವ ಕಾರಣದಿಂದ ಪ್ರಪಂಚ ಇವತ್ತು ವಿಶ್ವ ಜಲ ದಿನ ಎಂದು ಆಚರಿಸಿ ನೀರನ್ನು ಉಳಿಸಿ ಬೆಳೆಸುವ ಪ್ರಕ್ರಿಯೆಗೆ ಜನರನ್ನು ಉತ್ತೇಜಿಸಬೇಕು ಎನ್ನುವ ದೃಷ್ಟಿಯನ್ನು ಇಟ್ಟು ಈ ದಿನವನ್ನು ಸೀಮಿತವಾಗಿಸಿದ್ದಾರೆ. ನಾವು ಕೂಡ ಈ ದೃಷ್ಟಿಯಲ್ಲಿ ನಮ್ಮ ಬದುಕು ನೀರಿನಿಂದ ಅದಕ್ಕಾಗಿ ನೀರಿಗಾಗಿ ನಮ್ಮ ಬದುಕಿನ ಸ್ವಲ್ಪ ಭಾಗವನ್ನಾದರೂ ಮೀಸಲಿಡುವ ಕಾರ್ಯವಾಗಲಿ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ